ತ್ರಿವಳಿ ತಲಾಖ್ ನೀಡಲು ಮುಂದಾದ ಪತಿ : ಮಹಿಳೆಯಿಂದ ದೂರು

First Published 17, Feb 2018, 12:51 PM IST
Woman Files Complaint against Husband Over Dowry
Highlights

ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ ಪತಿ ವಿರುದ್ಧ ಮಹಿಳೆಯೋರ್ವರು ದೂರು ದಾಖಲು ಮಾಡಿದ್ದಾರೆ. ಕೆಆರ್ ಪುರಂ ಠಾಣೆಯಲ್ಲಿ ಪತಿ ರಿಯಾಜ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಬೆಂಗಳೂರು : ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ ಪತಿ ವಿರುದ್ಧ ಮಹಿಳೆಯೋರ್ವರು ದೂರು ದಾಖಲು ಮಾಡಿದ್ದಾರೆ. ಕೆಆರ್ ಪುರಂ ಠಾಣೆಯಲ್ಲಿ ಪತಿ ರಿಯಾಜ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

2004ರಲ್ಲಿ ಈಕೆ ರಿಯಾಜ್’ನೊಂದಿಗೆ ವಿವಾಹವಾಗಿದ್ದು, ವರದಕ್ಷಿಣೆಗಾಗಿ ಪತಿ ಪೀಡಿಸುತ್ತಿದ್ದುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವರದಕ್ಷಿಣೆ ನೀಡದಿದ್ದಲ್ಲಿ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಸುತ್ತಿದ್ದಾನೆ ಎಂದು ಹೇಳಿದ್ದಾರೆ.

ಅಲ್ಲದೇ ಕೇಂದ್ರ ಸರ್ಕಾರ ಈಗಾಗಲೇ ತ್ರಿವಳಿ ತಲಾಖ್’ಗೆ ನಿಷೇಧ ಹೇರಿದೆ. ಆದರೂ ಕೂಡ ಪತಿ ತ್ರಿವಳಿ ತಲಾಖ್ ನೀಡಲು ಮುಂದಾಗಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

loader