ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆ ಉಮಾ ಮಹೆಶ್ವರಿ ಎಂಬಾಕೆಯ ಫೇಸ್'ಬುಕ್ ಪೋಸ್ಟ್ ಸದ್ಯಕ್ಕೀಯ ಸುದ್ದಿ ಮಾಡುತ್ತಿದೆ. ತನ್ನ ಪೋಸ್ಟ್ ಒಂದರ ಮೂಲಕ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹೇಗೆ ಕಳ್ಳನಂತೆ ತನ್ನ ವಿಡಿಯೋ ಸೆರೆ ಹಿಡಿಯುತ್ತಿದ್ದಾತ ಎಂದು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾಳೆ. ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಲ್ಲದೇ ಈ ಘಟನೆಯನ್ನು ಫೇಸ್'ಬುಕ್'ಗೆ ಅಪ್ಲೋಡ್ ಮಾಡಿದ್ದಾಳೆ.
ನವದೆಹಲಿ(ಮೇ.17): ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆ ಉಮಾ ಮಹೆಶ್ವರಿ ಎಂಬಾಕೆಯ ಫೇಸ್'ಬುಕ್ ಪೋಸ್ಟ್ ಸದ್ಯಕ್ಕೀಯ ಸುದ್ದಿ ಮಾಡುತ್ತಿದೆ. ತನ್ನ ಪೋಸ್ಟ್ ಒಂದರ ಮೂಲಕ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹೇಗೆ ಕಳ್ಳನಂತೆ ತನ್ನ ವಿಡಿಯೋ ಸೆರೆ ಹಿಡಿಯುತ್ತಿದ್ದಾತ ಎಂದು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾಳೆ. ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಲ್ಲದೇ ಈ ಘಟನೆಯನ್ನು ಫೇಸ್'ಬುಕ್'ಗೆ ಅಪ್ಲೋಡ್ ಮಾಡಿದ್ದಾಳೆ.
ಘಟನೆಯ ಬಗ್ಗೆ ತಿಳಿಸಿರುವ ಉಮಾ ತಾನು ತನ್ನ ಗೆಳತಿಯ ಮನೆಗೆ ಮೆಟ್ರೋದಲ್ಲಿ ತೆರಳುತ್ತಿದ್ದೆ. ಈ ವೇಳೆ ತನ್ನೆದುರಿಗೆ ಬಂದು ಕುಳಿತಿದ್ದ, ಕೆಲ ಹೊತ್ತಿನ ಬಳಿಕ ಆತ ತನ್ನ ಮೊಬೈಲ್ ಹೊರತೆರಗೆದು ಅದೇನೋ ಗಂಭೀರವಾಗಿ ನೋಡುತ್ತಿರುವಂತೆ ನಾಟಕವಾಡಲಾರಂಭಿಸಿದ. ಆದರೆ ಆತನ ನಡವಳಿಕೆ ಸಂಶಯಾಸ್ಪದವಾಗಿತ್ತು. ಹೀಗಾಗಿ ಆತನ ಹಿಂದಿದ್ದ ಕಿಟಕಿಯ ಕನ್ನಡಿಯಲ್ಲಿ ನೋಡಿದಾಗ ಆತ ಮಾಡುತ್ತಿದ್ದ 'ಘನಂದಾರಿ ಕೆಲಸ' ಬಹಿರಂಗವಾಗಿಯ್ತು. ಕ್ಯಾಮರಾ ಆನ್ ಮಾಡಿಕೊಂಡಿದ್ದ ಆತ ತಮನ್ನ ವಿಡಿಯೋ ಮಾಡುತ್ತಿದ್ದ. ಹೀಗಾಗಿ ನಾನೂ ಮೊಬೈಲ್'ನಲ್ಲಿ ಆತನ ಕರಾಮತ್ತನ್ನು ಸೆರೆ ಹಿಡಿದೆ. ಬಳಿಕ ಈ ಕುರಿತಾಗಿ ಪೊಲೀಸರಿಗೆ ಮಾಹಿತಿ ರವಾನಿಸಿದೆ.
ಆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದ್ಯಾವುದನ್ನೂ ನಿರೀಕ್ಷಿಸದ ಆತ ಭಯಬಿದ್ದಿದ್ದು, ಪೊಲೀಸರ ಕಾಳಿಗೆ ಬಿದ್ದು ಉಮಾ ತನ್ನ ಸಹೋದರಿಯಂತೆ ಎಂದು ಹೇಳಲಾರಂಭಿಸಿದ್ದಾನಂತೆ.
ಫೇಸ್'ಬುಕ್'ನಲ್ಲಿ ಇದನ್ನು ಗಮನಿಸಿರುವ ವೀಕ್ಷಕರು ಉಮಾಳ ಈ ನಡೆಯನ್ನು ಪ್ರಶಂಸಿಸಿದ್ದಾರೆ ಅಲ್ಲದೇ, ವಿಡಿಯೋ ಸೆರೆ ಹಿಡಿದ ವ್ಯಕ್ತಿಗೆ ಛೀಮಾರಿ ಹಾಕಿದ್ದಾರೆ.
