ರಾಯಚೂರು[ಆ.31] : ಮತದಾನ ಮಾಡಿ ಹೊರಬಂದ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ರಾಯಚೂರಿನಲ್ಲಿ ಘಟನೆ ನಡೆದಿದೆ. ಮತ ಕೇಂದ್ರದ ಮುಂದೆ ವೃದ್ದೆ ಸಾವು. ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ 65 ವರ್ಷದ ಸತ್ಯವತಿ ಸಾವನ್ನಪ್ಪಿದ್ದಾರೆ. ಮಾನ್ವಿಯ ವಾರ್ಡ್ ನಂ. 14 ರಲ್ಲಿ ಮತ ಚಲಾಯಿಸಲು ಬಂದಿದ್ದ ಮಹಿಳೆ ಮತದಾನ ಮಾಡಿ ಹೊರಬಂದ ನಂತರ ಕುಸಿದು ಬಿದ್ದಿದ್ದಾರೆ.

ಕುಸಿದು ಬಿದ್ದ ಸತ್ಯವತಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.