ರಾಯ್`ಬರೇಲಿಯ ಮಿರ್ಗುಂಜ್`ನ ಸಿಎಚ್`ಸಿ ಆಸ್ಪತ್ರೆಯ ಮುಂದೆ ಈ ಘಟನೆ ನಡೆದಿದೆ

ಲಖನೌ(ಸೆ.26): ಜಂಗಲ್ ರಾಜ್ ಎಂಬ ಕುಖ್ಯಾತಿಗೆ ಕಾರಣವಾಗಿರುವ ಉತ್ತರಪ್ರದೇಶದಲ್ಲಿ ನಾಗರೀಕ ಸಮಾಜ ತಲೆತಗ್ಗಿಸುವಂಥಾ ಮತ್ತೊಂದು ಘಟನೆ ನಡೆದಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆಯ ಹೊರಭಾಗದ ಕುದುರೆ ಗಾಡಿಯಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಯ್`ಬರೇಲಿಯ ಮಿರ್ಗುಂಜ್`ನ ಸಿಎಚ್`ಸಿ ಆಸ್ಪತ್ರೆಗೆ ಹೆರಿಗೆಗೆಂದು ಮಹಿಳೆಯನ್ನ ಕರೆತರಲಾಗಿತ್ತು. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಒಳಗೆ ಪ್ರವೇಶ ಸಿಕ್ಕಿಲ್ಲ. ಹೀಗಾಗಿ, ತುಂಬುಗರ್ಭಿಣಿ ಕುದುರೆಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.