ಪತಿಯ ಮರ್ಮಾಂಗ ಕಚ್ಚಿ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 1:16 PM IST
Woman Bite Her Husband Penis After She Busted with love
Highlights

ಮಹಿಳೆಯೋರ್ವಳು ಪತಿಯ ಮರ್ಮಾಂಗವನ್ನೇ ಕಚ್ಚಿ ಪ್ರಿಯಕರನೊಂದಿಗೆ ಓಡಿಹೋದ ಪ್ರಕರಣವೊಂದು ತಮಿಳುನಾಡಿನಲ್ಲಿ ನಡೆದಿದೆ. 

ಚೆನ್ನೈ: ಇನ್ನೊಬ್ಬ ಹೆಂಗಸಿನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಕಾರಣಕ್ಕಾಗಿ ಪತ್ನಿ, ಗಂಡನ ಮರ್ಮಾಂಗ ಕತ್ತರಿಸಿದ ಘಟನೆ ಕೇಳಿದ್ದೇವೆ. ಆದರೆ, ಇಲ್ಲೊಬ್ಬಳು ಪ್ರಿಯಕರ ಜೊತೆ ತಾನೇ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಲ್ಲದೇ ತಮ್ಮಿಬ್ಬರ ಪ್ರೇಮಕ್ಕೆ ಅಡ್ಡಿಬಂದ ಗಂಡನ ಮರ್ಮಾಂಗವನ್ನು ಕಚ್ಚಿ ಪರಾರಿಯಾದ ಘಟನೆ ನಡೆದಿದೆ. 

 ತಮಿಳುನಾಡಿನ ವೆಲ್ಲೂರು ಜಿಲೆಯಲ್ಲಿ ಸೋಮವಾರ ನಾಟಕ ನೋಡಲು ಜಯಂತಿ ತನ್ನ ಗಂಡನ ಜೊತೆ ಹೋಗಿದ್ದಳು. ಈ ವೇಳೆ ಹೊರಗೆ  ಹೋಗಿ ಬರುವ ನೆಪ ಹೇಳಿ ಪ್ರಿಯಕರನ ಭೇಟಿಗೆ ತೆರಳಿದ್ದಳು. ಒಂದು ಗಂಟೆಯಾದರೂ ಆಕೆ ಮರಳದ್ದರಿಂದ ಅನುಮಾನ ಬಂದು ಪತಿ ಹುಡುಕಾಡಿದಾಗ ಆಕೆ ಪ್ರಿಯಕರನೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದಳು. 

ಇದರಿಂದ ಕುಪಿತಗೊಂಡ ಪತಿ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಆತ ಉಟ್ಟುಕೊಂಡಿದ್ದ ಧೋತಿ ಕಳಚಿಬಿದ್ದಿದೆ. ಈ ವೇಳೆ ಆಕೆ ಗಂಡನ ಮರ್ಮಾಂಗವನ್ನು ಕಚ್ಚಿದ ಜಯಂತಿ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

loader