ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್  ಶೆಟ್ಟಿ ಎನ್ನುವ ಯುವಕನೀಗ ಇದೀಗ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎನ್ನುವ ಅನುಮಾನದಿಂದ  ಯುವತಿಯನ್ನು ತೊರೆಯುತ್ತಿರುವುದಾಗಿ ಕಾರಣ ನೀಡಿದ್ದಾನೆ. ಇದರಿಂದ ಮನನೊಂದ ಯುವತಿ  ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾಳೆ.

ಹಾಸನ(ಡಿ.3): 7 ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆ ದಿನವೇ ಹುಡುಗ - ಹುಡುಗಿಗೆ ಕೈಕೊಟ್ಟ ಪ್ರಕರಣ ಹಾಸನದಲ್ಲಿ ನಡೆದಿದೆ. ಕಳೆದ 7 ವರ್ಷಗಳಿಂದಲೂ ಕೂಡ ಇಬ್ಬರೂ ಲಿವಿಂಗ್ ಟು ಗೆದರ್' ಸಂಬಂಧದಲ್ಲಿ ಇದ್ದರು ಎನ್ನಲಾಗಿದೆ.

ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಶೆಟ್ಟಿ ಎನ್ನುವ ಯುವಕನೀಗ ಇದೀಗ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎನ್ನುವ ಅನುಮಾನದಿಂದ ಯುವತಿಯನ್ನು ತೊರೆಯುತ್ತಿರುವುದಾಗಿ ಕಾರಣ ನೀಡಿದ್ದಾನೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾಳೆ.

ಬೆಂಗಳೂರು ಮೂಲದ ಆಕೆಯೂ ಕೂಡ ಖಾಸಗಿ ಕಂಪನಿಯೊಂದರಲ್ಲಿ ಎಚ್'ಆರ್ ಆಗಿದ್ದಳು ಎನ್ನಲಾಗಿದೆ. ಹಾಸನದ ಹೊಳೆ ನರಸೀಪುರದ ಕಲ್ಯಾಣ ಮಂಟಪದಲ್ಲಿ ನಿನ್ನೆ ಹಾಗೂ ಇಂದು ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ತಾಳಿ ಕಟ್ಟಬೇಕಾದವನು ಈಗ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಕೆಲ ದಿನಗಳ ಹಿಂದೆಯೂ ಕೂಡ ಆಕೆಯನ್ನು ಹುಡುಗನ ಮನೆಗೆ ಕರೆಸಿಕೊಂಡು ವಿವಿಧ ರೀತಿಯ ಪ್ರಶ್ನೆ ಮಾಡಿ, ಯಾವುದೇ ರೀತಿಯಾದ ಸಮಸ್ಯೆಯಾದರೂ ಕೂಡ ಯಾರಿಗೂ ಹೇಳುವಂತಿಲ್ಲ. ಕೆಲಸಕ್ಕೂ ಹೋಗುವಂತಿಲ್ಲ ಎಂದು ತನಗೆ ಹೇಳಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ.