ವಾಟ್ಸಪ್ ಹಾಗೂ ಇತರ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವೈರಲ್ ಆಗಿದ್ದು, ನೋಡುಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋಗೆ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು , ಮಹಿಳೆಯನ್ನು ಬಂಧಿಸಿದ್ದಾರೆ
ಊಟವನ್ನು ಚೆಲ್ಲಿದ್ದಕ್ಕೆ 6 ವರ್ಷದ ಬಾಲಕಿಯನ್ನು ಮಹಿಳೆಯೊಬ್ಬಳು ಕ್ರೂರವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿರುವ ಘಟನೆ ಮಲೇಶಿಯಾದಲ್ಲಿ ನಡೆದಿದೆ.

ವಿಡಿಯೋನಲ್ಲಿ. ತಮಿಳು ಮಾತನಾಡುತ್ತಿದ್ದ ಮಹಿಳೆ ಬಾಲಕಿಯ ಪೋಷಕರ ಅನುಪಸ್ಥಿತಿಯಲ್ಲಿ ಆಕೆಯನ್ನು ಊಟದ ತಟ್ಟೆಯಿಂದ ಎಬ್ಬಿಸಿ, ಮರದಿಂದ ತಯಾರಿಸಲಾದ ಬೆನ್ನು ತುರಿಸುವ ಉಪಕರಣದಿಂದ ಅತೀ ಕ್ರೂರವಾಗಿ ಥಳಿಸಿದ್ದಾಳೆ. ಆ ಬಾಲಕಿ ಎಷ್ಟು ಬೇಡಿಕೊಂಡರೂ ಆಕೆ ಹೊಡೆಯುದನ್ನು ಮುಂದುವರಿಸಿದ್ದಾಳೆ. ಊಟ ಮಾಡಲು ಗೊತ್ತಿಲ್ವಾ... ನೀನು ಸಾಯು... ಎಂದು ಬೈಯುತ್ತಾಳೆ. ವಿಡಿಯೋ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ವಾಟ್ಸಪ್ ಹಾಗೂ ಇತರ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವೈರಲ್ ಆಗಿದ್ದು, ನೋಡುಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋಗೆ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು , ಮಹಿಳೆಯನ್ನು ಬಂಧಿಸಿದ್ದಾರೆ ಎಂದು ಫ್ರೀ ಮಲೇಶಿಯಾ ಟುಡೇ ವರದಿ ಮಾಡಿದೆ.
