Asianet Suvarna News Asianet Suvarna News

ಲೈಫ್ ಜಾಕೇಟ್ ಧರಿಸದೇ ಬೋಟಿಂಗ್ ಗಿಳಿಯುವ ಪ್ರವಾಸಿಗರು, ಜಾಣ ಕುರುಡು ಪ್ರದರ್ಶಿಸುತ್ತಿರುವ ಜಿಲ್ಲಾಡಳಿತ

ಪ್ರವಾಸಿಗರ ಆಕರ್ಷಣೀಯ ತಾಣವಾದ ಬೆಳಗಾವಿಗೆ ಬೋಟಿಂಗೆಂದು ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ದುರಂತ ಏನಪ್ಪಾ ಅಂದರೆ  ಬೋಟಿಂಗ್‌ ಮಾಡುವ ಜನರು ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವುದಿಲ್ಲ.

Without life jacket tourist get into boating district administration shows negligancy

ಬೆಳಗಾವಿ (ಡಿ.20): ಪ್ರವಾಸಿಗರ ಆಕರ್ಷಣೀಯ ತಾಣವಾದ ಬೆಳಗಾವಿಗೆ ಬೋಟಿಂಗೆಂದು ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ದುರಂತ ಏನಪ್ಪಾ ಅಂದರೆ  ಬೋಟಿಂಗ್‌ ಮಾಡುವ ಜನರು ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವುದಿಲ್ಲ.

ಬೋಟಿಂಗ್ ಮಾಡುವಾಗ ಸುರಕ್ಷಿತ ದೃಷ್ಟಿಯಿಂದ ಲೈಫ್‌ ಜಾಕೇಟ್‌ ಬಳಸಲೇಬೇಕು. ಆದರೆ ಬೆಳಗಾವಿಯ ಕೋಟೆ ಕೆರೆಯಲ್ಲಿ ಬೋಟಿಂಗ್​ಗೆ ಯುವಕ-ಯುವತಿಯರು, ನವ ಜೋಡಿಗಳು, ಚಿಕ್ಕ ಚಿಕ್ಕ ಮಕ್ಕಳು ತಂದೆ ತಾಯಿ ಜೊತೆ ಬರುತ್ತಾರೆ. ಯಾರೊಬ್ಬರು ಲೈಫ್ ಜಾಕೇಟ್‌ ಹಾಕಿಕೊಳ್ಳುವುದಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣವೇ ನೆರವಿಗೆ ಧಾವಿಸಲು ಯಾವುದೇ ರಕ್ಷಣಾ ತಂಡವು ಇಲ್ಲಿಲ್ಲ. ಇನ್ನು ಅಸುರಕ್ಷಿತ ಬೋಟಿಂಗ್‌ ನಡೆಯುತ್ತಿದ್ದರೂ  ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇತ್ತ ಗಮನವೇ ಹರಿಸುತ್ತಿಲ್ಲ.

ಇತ್ತೀಚೆಗೆ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್‌ ಚಿತ್ರೀಕರಣದ ದುರಂತ ನಮ್ಮ ಕಣ್ಣ್ಮುಂದಿದೆ. ಹೀಗಿದ್ದರೂ ಕುಂದಾನಗರಿಯಲ್ಲಿ ಡೇಂಜರ್‌ ಬೋಟಿಂಗ್‌ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಜಾಣಕುರುಡತನ ಪ್ರದರ್ಶಿಸುತ್ತಿದೆ.

Follow Us:
Download App:
  • android
  • ios