ಶಿವಮೊಗ್ಗ(ಸೆ.16): ತಾಯಿಯೊಬ್ಬಳು ಪ್ರಿಯಕರನ ಜೊತೆ ಸೇರಿ ಹೆತ್ತ ಮಗಳನ್ನೇ ಕೊಲೆ ಮಾಡಿರುವ ಅನುಮಾನಸ್ಪದ ಘಟನೆಯೊಂದು ಶಿವಮೊಗ್ಗದ ಸೂಳೆಬೈಲ್ ಬಡಾವಣೆಯಲ್ಲಿ ನಡೆದಿದೆ.
5 ವರ್ಷದ ಬಾಲಕಿ ಫಾತಿಮಾಳನ್ನು ಪ್ರಿಯಕರ ಅರ್ಷದ್ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಆರೋಪಿ ತಾಯಿ ಸಯಿದಾಳನ್ನು ತುಂಗಾನಗರ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಮದುವೆಯಾಗಿ 6 ವರ್ಷಗಳ ಬಳಿಕ ಪೇಂಟಿಂಗ್ ಕೆಲಸ ಮಾಡುವ ಅರ್ಷದ್ ನ ಪ್ರೇಮಪಾಶಕ್ಕೆ ಸಿಲುಕಿದ ಸಯಿದಾ, ಮಗಳನ್ನು ಕರೆದುಕೊಂಡು ಆತನೊಂದಿಗೆ ಎರಡೆರದು ಬಾರಿ ಓಡಿ ಹೋಗಿದ್ದಳು. ರಾಜಿ ಪಂಚಾಯ್ತಿ ಸಫಲವಾಗಿರಲಿಲ್ಲ.
ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮಗುವನ್ನು ತೆಗೆದುಕೊಂಡು ಬಂದು ಖಬರಸ್ತಾನ್'ದಲ್ಲಿ ಹೂಳಲು ಮುಂದಾಗಿದ್ದಳು. ತಕ್ಷಣವೇ ಪೋಲಿಸರು ಸ್ಥಳಕ್ಕಾಗಮಿಸಿ ಸಯಿದಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
