ಕಷ್ಟದಲ್ಲಿರುವವರಿಗೆ ಕೂಡಲೇ ಸ್ಪಂದಿಸುವ ಸುಷ್ಮಾ ಸ್ವರಾಜ್ ನೆರೆಯ ಪಾಕಿಸ್ತಾನಕ್ಕೆ ನೆರವಿನ ಹಸ್ತ ಚಾಚಿ ಸಹೃದಯತೆ ತೋರಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪಾಕಿಸ್ತಾನ ಮೂಲದ 4 ತಿಂಗಳ ಮಗು ರೋಹಾನ್ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಹಾಗಾಗಿ ರೋಹಾನ್ ತಂದೆ ಸಾದಿಕ್ ಭಾರತಕ್ಕೆ ಬರಲು ನೆರವು ನೀಡುವಂತೆ ಮನವಿ ಮಾಡಿದ್ದರು. ಎಲ್ಲಾ ನಿರ್ಬಂಧಗಳನ್ನು ಬದಿಗೊತ್ತಿ ಸುಷ್ಮಾ ಸ್ವರಾಜ್ ಮಗುವಿಗೆ ಮೆಡಿಕಲ್ ವೀಸಾ ನೀಡಿ ಭಾರತಕ್ಕೆ ಕರೆತರಲು ನೆರವು ನೀಡಿದ್ದಾರೆ. ಇಂದು ಸಾದಿಕ್ ದಂಪತಿ ಮಗುವಿನ ಜೊತೆ ಭಾರತಕ್ಕೆ ಬಂದಿಳಿದಿದ್ದಾರೆ.

ನವದೆಹಲಿ (ಜೂ.13): ಕಷ್ಟದಲ್ಲಿರುವವರಿಗೆ ಕೂಡಲೇ ಸ್ಪಂದಿಸುವ ಸುಷ್ಮಾ ಸ್ವರಾಜ್ ನೆರೆಯ ಪಾಕಿಸ್ತಾನಕ್ಕೆ ನೆರವಿನ ಹಸ್ತ ಚಾಚಿ ಸಹೃದಯತೆ ತೋರಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪಾಕಿಸ್ತಾನ ಮೂಲದ 4 ತಿಂಗಳ ಮಗು ರೋಹಾನ್ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಹಾಗಾಗಿ ರೋಹಾನ್ ತಂದೆ ಸಾದಿಕ್ ಭಾರತಕ್ಕೆ ಬರಲು ನೆರವು ನೀಡುವಂತೆ ಮನವಿ ಮಾಡಿದ್ದರು. ಎಲ್ಲಾ ನಿರ್ಬಂಧಗಳನ್ನು ಬದಿಗೊತ್ತಿ ಸುಷ್ಮಾ ಸ್ವರಾಜ್ ಮಗುವಿಗೆ ಮೆಡಿಕಲ್ ವೀಸಾ ನೀಡಿ ಭಾರತಕ್ಕೆ ಕರೆತರಲು ನೆರವು ನೀಡಿದ್ದಾರೆ. ಇಂದು ಸಾದಿಕ್ ದಂಪತಿ ಮಗುವಿನ ಜೊತೆ ಭಾರತಕ್ಕೆ ಬಂದಿಳಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಮಗ ರೋಹನ್ ಗೆ ಹೃದಯದಲ್ಲಿ ತೂತಾಗಿತ್ತು. ಈಗ ನೋಯ್ಡಾದ ಜಾಯ್ಪೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಷ್ಮಾ ಸ್ವರಾಜ್ ರವರ ಸಹಾಯಕ್ಕೆ ನಾನು ಚಿರಋಣಿ ಎಂದು ಮಗುವಿನ ತಂದೆ ಸಾದಿಕ್ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

ಭಾರತ-ಪಾಕ್ ಸಂಬಂಧ ಹದಗೆಟ್ಟಿದ್ದರೂ ಸಹ ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಆಸೀಸ್ ಶಿಫಾರಸ್ಸಿನ ಮೇಲೆ ಮೆಡಿಕಲ್ ವೀಸಾವನ್ನು ನೀಡಲಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.

(ಫೋಟೋ ಕೃಪೆ: ಎಎನ್ಐ)