ವಿಶ್ವ ವೇದಿಕೆಯಲ್ಲಿ ಭಾರತ ಬೆಂಬಲಿಸಿದ ಚೀನಾ, ಪಾಕಿಸ್ತಾನ| ಜಾಗತಿಕವಾಗಿ ಭಾರತದ ವರ್ಚಸ್ಸು ಮತ್ತಷ್ಟು ವೃದ್ಧಿ| ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಎರಡು ವರ್ಷಗಳಿಗೆ ಶಾಶ್ವತವಲ್ಲದ ಸ್ಥಾನದ ಉಮೇದುವಾರಿಕೆ| ಭಾರತಕ್ಕೆ ಶಾಶ್ವತವಲ್ಲದ ಸ್ಥಾನಕ್ಕಾಗಿ ವಿಶ್ವಸಂಸ್ಥೆಯಲ್ಲಿ ಬೆಂಬಲ ಸೂಚಿಸಿದ ಏಷ್ಯಾ-ಫೆಸಿಫಿಕ್ ಗುಂಪು| ಭಾರತದ ಉಮೇದುವಾರಿಕೆ ಬೆಂಬಲಿಸಿದ ಚೀನಾ, ಪಾಕಿಸ್ತಾನ|

ವಿಶ್ವಸಂಸ್ಥೆ(ಜೂ.26): ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ದಿನೇ ದಿನೇ ಗಟ್ಟಿಯಾಗುತ್ತಿದೆ. ನವಭಾರತದ ಸಂಕಲ್ಪ ಹೊತ್ತ ಪ್ರಧಾನಿ ಮೋದಿ ಭಾರತವನ್ನು ವಿಶ್ವ ಭೂಪಟದಲ್ಲಿ ಕಂಗೊಳಿಸುತ್ತಿದ್ದಾರೆ.

ಜಾಗತಿಕವಾಗಿ ಭಾರತದ ವರ್ಚಸ್ಸು ಇದೀಗ ಮತ್ತಷ್ಟು ವೃದ್ಧಿಸಿದ್ದು, ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಎರಡು ವರ್ಷಗಳಿಗೆ ಶಾಶ್ವತವಲ್ಲದ ಸ್ಥಾನದ ಉಮೇದುವಾರಿಕೆಗೆ ಬಲ ಬಂದಿದೆ.

ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತವಲ್ಲದ ಸ್ಥಾನಕ್ಕಾಗಿ ವಿಶ್ವಸಂಸ್ಥೆಯಲ್ಲಿ ಏಷ್ಯಾ-ಫೆಸಿಫಿಕ್ ಗುಂಪು ಸರ್ವಾನುಮತದಿಂದ ಅನುಮೋದಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿತ್ವ ರಾಯಭಾರಿ ಸೈಯದ್ ಅಕ್ಬರುದ್ದೀನ್, ರಡು ವರ್ಷಗಳ ಅವಧಿಗೆ ಭದ್ರತಾ ಮಂಡಳಿಯಲ್ಲಿ ಶಾಶ್ವತರಹಿತ ಸ್ಥಾನಕ್ಕೆ ಭಾರತದ ಸದಸ್ಯ ಸ್ಥಾನಕ್ಕೆ ವಿಶ್ವಸಂಸ್ಥೆಯಲ್ಲಿನ ಏಷ್ಯಾ-ಫೆಸಿಫಿಕ್ ಗುಂಪು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

Scroll to load tweet…

ಅಲ್ಲದೇ ಈ ನಡೆಯನ್ನು ಸರ್ವಾನುಮತದ ಹೆಜ್ಜೆ ಎಂದು ಬಣ್ಣಿಸಿರುವ ಅಕ್ಬರುದ್ದೀನ್, ಎಲ್ಲಾ 55 ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಭಾರತದ ಶಾಶ್ವತರಹಿತ ಸದಸ್ಯ ಸ್ಥಾನಕ್ಕೆ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಕಿರ್ಗಿಸ್ತಾನ್, ಕುವೈತ್, ಇರಾನ್, ಖತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ, ಯುಎಇ, ಭೂತಾನ್, ಇಂಡೋನೇಷಿಯಾ, ಮಲೇಷಿಯಾ, ಮಾಲ್ಡೀವ್ಸ್, ಮಯನ್ಮಾರ್, ವಿಯೆಟ್ನಾಂ, ಚೀನಾ, ಜಪಾನ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ದೇಶಗಳು ಬೆಂಬಲ ಸೂಚಿಸಿವೆ.