ಚಂಡೀಗಢ[ಸೆ.12]: ಹರ್ಯಾಣ ಸಿಎಂ ಮನೋಹರ್‌ಲಾಲ್‌ ಖಟ್ಟರ್‌ ಬಿಜೆಪಿ ನಾಯಕನೊಬ್ಬನಿಗೆ ತಲೆ ಕತ್ತರಿಸಿ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ ಘಟನೆ ಬುಧವಾರ ಇಲ್ಲಿ ನಡೆದಿದೆ.

ಚುನಾವಣಾ ಪ್ರಚಾರದ ರೋಡ್‌ ಶೋ ಒಂದರಲ್ಲಿ ಖಡ್ಗ ಹಿಡಿದು ಭಾಷಣ ಮಾಡುತ್ತಿದ್ದ ಖಟ್ಟರ್‌ ಈ ಖಡ್ಗದಿಂದ ವಿರೋಧಿಗಳನ್ನು ಹೇಗೆ ನಿರ್ನಾಮ ಮಾಡಬಹುದು ಎಂದು ಹೇಳುತ್ತಿದ್ದರು. ಈ ವೇಳೆ ಪಕ್ಕದಲ್ಲಿದ್ದ ಅವರ ಪಕ್ಷದ ನಾಯಕನೊಬ್ಬ ಖಟ್ಟರ್‌ಗೆ ಕಿರೀಟ ತೊಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸಿಎಂ ಏನು ಮಾಡುತ್ತಿದ್ದೀಯಾ? ನಿನ್ನ ತಲೆ ಕತ್ತರಿಸಿ ಹಾಕುತ್ತೇನೆ ಎಂದು ಅಬ್ಬರಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ 'ಹುಷಾರಾಗಿರಿ, ಅಹಂಕಾರ ಆರೋಗ್ಯಕ್ಕೆ ಮಾರಕ' ಎಂದಿದೆ.