Asianet Suvarna News Asianet Suvarna News

ನೋಟು ನಿಷೇಧ ಬಿಸಿಗೆ ಬಲಿಯಾಯಿತು ಚಳಿಗಾಲ ಅಧಿವೇಶನ

ಹಿರಿಯ ನಾಗರಿಕರಿಗೆ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ ಮಂಡನೆಯಾಗಬೇಕಿದ್ದ ಕಡ್ಡಾಯ ಆರೋಗ್ಯ ವಿಮೆ ಮಸೂದೆ, ಮಸೂದೆ, ಮರುಭೂಮಿ ಮತ್ತು ಬರಪೀಡಿತ ಪ್ರದೇಶಗಳಲ್ಲಿ ನೀರು ಒದಗಿಸುವ ಮಹತ್ವದ ಮಸೂದೆ ಸೇರಿದಂತೆ ಹಲವು ಮಸೂದೆಗಳು ಮಂಡನೆಯೇ ಆಗದೆ ಉಳಿದವು.

Winters Session Concludes With No Business over Currency Ban Issue

ನವದೆಹಲಿ (ಡಿ.16): ಸಂಸತ್ತು ಚಳಿಗಾಲ ಅಧೀವೇಶನದ ಕೊನೆಯ ದಿನವಾದ ಇಂದು ಕೂಡಾ ರಾಜ್ಯಸಭೆಯಲ್ಲಿ ಕಲಾಪಗಳು ನಡೆಯಲಿಲ್ಲ. ರಾಜ್ಯ ಸಭೆ ಕಲಾಪಗಳು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ಈ ಬಾರಿಯ ಅಧಿವೇಶನದಲ್ಲಿ  ಒಂದೇ ಒಂದು ದಿನವೂ ಕಲಾಪ ನಡೆಯದೆ ಮುಂದೂಡಲ್ಪಟ್ಟಿರುವುದೇ ಸಾಧನೆ. ಇಡೀ 29 ದಿನದ ಕಲಾಪವನ್ನು ಹಳೆ ನೋಟು ರದ್ದು ವಿಚಾರವೇ ನುಂಗಿಹಾಕಿದೆ.

ನೋಟು ನಿಷೇಧವು ಪ್ರಧಾನಿ ಮೋದಿಯವರ ವೈಯುಕ್ತಿಕ ನಿರ್ಧಾರವಾಗಿದ್ದರಿಂದ ಅವರು ಖುದ್ದಾಗಿ ಬಂದು ಚರ್ಚೆಯಲ್ಲಿ ಭಾಗವಹಿಸಿ ಉತ್ತರ ಕೊಡಬೇಕೆಂದು ಪ್ರತಿಪಕ್ಷಗಳು ಪಟ್ಟುಹಿಡಿದಿದ್ದವು. ಆದರೆ ಪ್ರಧಾನಿ ಮೋದಿ ಕೇವಲ ಒಂದು ಬಾರಿ ಕಲಾಪದಲ್ಲಿ ಉಪಸ್ಥಿತರಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಷಣವನ್ನು ಆಲಿಸಿದ್ದರು. ಆ ಬಳಿಕ ಅವರು ಚರ್ಚೆಯಲ್ಲಿ ಭಾಗವಹಿಸಲಿಲ್ಲ.

 ಆ ಕಾರಣದಿಂದಾಗಿ ಕೇವಲ, ಗದ್ದಲ, ಪ್ರತಿಭಟನೆಗಳಿಗೆ ಸಾಕ್ಷಿಯಾದ ರಾಜ್ಯಸಭೆಯಲ್ಲಿ ಒಂದೇ ಒಂದು ದಿನವೂ ಕಲಾಪ ನಡೆಯಲಲಿಲ್ಲ. ಚರ್ಚೆಯೂ ನಡೆಯಲಿಲ್ಲ.

ಹಿರಿಯ ನಾಗರಿಕರಿಗೆ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ ಮಂಡನೆಯಾಗಬೇಕಿದ್ದ ಕಡ್ಡಾಯ ಆರೋಗ್ಯ ವಿಮೆ ಮಸೂದೆ, ಮಸೂದೆ, ಮರುಭೂಮಿ ಮತ್ತು ಬರಪೀಡಿತ ಪ್ರದೇಶಗಳಲ್ಲಿ ನೀರು ಒದಗಿಸುವ ಮಹತ್ವದ ಮಸೂದೆ ಸೇರಿದಂತೆ ಹಲವು ಮಸೂದೆಗಳು ಮಂಡನೆಯೇ ಆಗದೆ ಉಳಿದವು.

Follow Us:
Download App:
  • android
  • ios