ಸಂಸತ್ ಚಳಿಗಾಲದ ಅಧಿವೇಶನ ಡಿ.15 ರಿಂದ ಜ. 05 ರವರೆಗೆ ನಡೆಯಲಿದೆ ಎಂದು ಸಂಸತ್ ರಾಜಕೀಯ ವ್ಯವಹಾರಗಳ ಸಮಿತಿ ಅಧಿಕೃತಪಡಿಸಿದೆ.

ನವದೆಹಲಿ (ನ.24): ಸಂಸತ್ ಚಳಿಗಾಲದ ಅಧಿವೇಶನ ಡಿ.15 ರಿಂದ ಜ. 05 ರವರೆಗೆ ನಡೆಯಲಿದೆ ಎಂದು ಸಂಸತ್ ರಾಜಕೀಯ ವ್ಯವಹಾರಗಳ ಸಮಿತಿ ಅಧಿಕೃತಪಡಿಸಿದೆ.

14 ದಿನಗಳ ಸಂಸತ್ ಚಳಿಗಾಲದ ಅಧಿವೇಶನ ಗುಜರಾತ್ ಚುನಾವಣಾ ಮತದಾನದ ಮಾರನೇ ದಿನದಿಂದ ಅಂದರೆ ಡಿ. 15 ರಿಂದ ಶುರುವಾಗಲಿದೆ.

ಅಧಿವೇಶನದಲ್ಲಿ ಯಾವ್ಯಾವ ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಬೇಕು ಎಂಬುವುದನ್ನು ಪಕ್ಷ ನಿರ್ಧರಿಸಲಿದೆ. ಜಿಎಸ್'ಟಿ, ಡಿಮಾನಿಟೈಸೇಶನ್, ಜಮ್ಮು-ಕಾಶ್ಮೀರ ಭಯೋತ್ಪಾದನೆ ವಿಚಾರ ಇಂತಹ ಪ್ರಮುಖ ವಿಚಾರಗಳನ್ನು ಕಾಂಗ್ರೆಸ್ ಎತ್ತಲಿದೆ ಎಂದು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.