ಅನ್‌ಲಿಮಿಟೆಡ್ ಕಾಲಿಂಗ್ ಪ್ಲಾನ್‌ ಬಂದ್ ಆಗುತ್ತಾ? ಬಳಕೆದಾರರಿಗೆ ಶುರುವಾಯ್ತು ಹೊಸ ಟೆನ್ಷನ್!

ಟೆಲಿಕಾಂ ಕಂಪನಿಗಳು ತಮ್ಮ ಎಲ್ಲಾ ಪ್ಲಾನ್‌ಗಳಲ್ಲಿ  ಅನಿಯಮಿತ  ಕರೆ, 100 ಎಸ್‌ಎಂಸ್ ಸೌಲಭ್ಯವನ್ನು  ನೀಡುತ್ತಿವೆ. ಆದ್ರೆ ಈ ಎಲ್ಲಾ ಆಫರ್ ಬಂದ್ ಆಗಿ, ಕಾಲಿಂಗ್‌ಗಾಗಿಯೇ ಪ್ರತ್ಯೇಕ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತಾಎ ಅನ್ನೋ ಪ್ರಶ್ನೆ ಮುನ್ನೆಲೆಗೆ ಬಂದಿದೆ.

Will the unlimited calling sms data plan be discontinued mrq

ನವದೆಹಲಿ: ಟೆಲಿಕಾಂ ಇಂಡಸ್ಟ್ರಿಯ ಅನಿಯಮಿತ ಕರೆಗಳು (Unlimited Call), ಇಂಟರ್‌ನೆಟ್‌ ಸೌಲಭ್ಯದ (Data Plan) ಭವಿಷ್ಯ ಅಪಾಯದಲ್ಲಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಈ ವಿಷಯ ಹೊರ ಬರುತ್ತಿದ್ದಂತೆ ಕೋಟ್ಯಂತರ ಬಳಕೆದಾರರು ಚಿಂತೆಯಲ್ಲಿದ್ದಾರೆ. ನಮ್ಮ ಇಷ್ಟದ ಅನ್‌ಲಿಮಿಟೆಡ್ ಕಾಲ್, ಹೈಸ್ಪೀಡ್ ಡೇಟಾ ಪ್ಲಾನ್‌ಗಳು ಬಂದ್ ಆದ್ರೆ ಏನು ಮಾಡೋದು ಎಂದು ಎಲ್ಲಾ ಟೆಲಿಕಾಂ ಕಂಪನಿಗಳ ಮಾಲೀಕರು ಚಿಂತಿತರಾಗಿದ್ದಾರೆ. ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ (Reliance Jio), ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vodaphone Idea) ತಾವು ಗ್ರಾಹಕರಿಗೆ ನೀಡುತ್ತಿರುವ ಅನ್‌ಲಿಮಿಟೆಡ್ ಕಾಲಿಂಗ್ ಸೇರಿದಂತೆ ಹಲವು ಸೌಲಭ್ಯಗಳ ಬಗ್ಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮುಂದೆ (Telecom Regulatory Authority of India- TRAI) ಹೇಳಿಕೆಯನ್ನು ದಾಖಲಿಸಿವೆ. 

ಮೂರು ಕಂಪನಿಗಳು ತಮ್ಮ ಬಳಕೆದಾರರಿಗೆ ನೀಡುತ್ತಿರುವ ಅನ್‌ಲಿಮಿಟೆಡ್ ಕಾಲಿಂಗ್ ಸೌಲಭ್ಯವನ್ನು ಸಮರ್ಥಿಸಿಕೊಂಡಿವೆ. ಕೇವಲ ಕಾಲಿಂಗ್‌ಗಾಗಿ ಬೇರೆ ಬೇರೆ ರೀಚಾರ್ಜ ಪ್ಲಾನ್ ನೀಡುವ ಅಗತ್ಯವಿಲ್ಲ. ಸಮಗ್ರ ಸೇವೆಯನ್ನು ಒದಗಿಸಲು ಅನ್‌ಲಿಮಿಟೆಡ್‌ ಕಾಲಿಂಗ್  ವಿನ್ಯಾಸಗೊಳಿಸಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ.

TRAI ಮುಂದೆ AIRTEL ಹೇಳಿದ್ದೇನು?
ಸದ್ಯ ನೀಡಲಾಗುತ್ತಿರುವ ಪ್ಲಾನ್‌ಗಳು ತುಂಬಾ ಸರಳ ಮತ್ತು ಯೂಸರ್ ಫ್ರೆಂಡ್ಲಿ ಆಗಿವೆ. ನಮ್ಮ ಬಳಕೆದಾರರಿಗೆ ಯಾವುದೇ ರಹಸ್ಯ ಶುಲ್ಕವನ್ನು ವಿಧಿಸದೇ 
ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್, ಡೇಟಾ ಹಾಗೂ ಎಸ್‌ಎಂಎಸ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬಳಕೆದಾರರು ತಾವು ಪಾವತಿಸುವ ಹಣಕ್ಕೆ ಯಾವೆಲ್ಲಾ ಸೌಲಭ್ಯಗಳಕನ್ನು ಪಡೆದುಕೊಳ್ಳುತ್ತಿದೆ ಎಂಬುವುದು ಈಗಿನ ಪ್ಲಾನ್‌ಗಳಲ್ಲಿ ತಿಳಿಯುತ್ತಿದೆ. ನಮ್ಮ ಎಲ್ಲಾ ಪ್ಲಾನ್‌ಗಳು ಪಾರದರ್ಶಕವಾಗಿವೆ. ಪ್ರತಿಯೊಂದು ಸೌಲಭ್ಯಕ್ಕೆ ಪ್ರತ್ಯೇಕ ಶುಲ್ಕ ವಿಧಿಸಿದ್ರೆ ಬಳಕೆದಾರರಿಗೆ ಹೊರೆಯಾಲಿದೆ. ಹಿಂದಿನ ವ್ಯವಸ್ಥೆಗೆ ಮರಳಿದ್ರೆ ಹಲವು ರೀಚಾರ್ಜ್‌ಗಳನ್ನು ಮಾಡಿಕೊಳ್ಳಬೇಕಾಗುತ್ತ ದೆ. 

TRAI ಮುಂದೆ Reliance Jio ಹೇಳಿದ್ದೇನು?
ರಿಲಯನ್ಸ್ ಜಿಯೋ ತನ್ನ ಆಂತರಿಕ ಸಮೀಕ್ಷೆಯ ಅಂಕಿ ಅಂಶಗಳನ್ನು ಇರಿಸಿದೆ. ಶೇ.91ರಷ್ಟು ಬಳಕೆದಾರರ ಪೈಕಿ ಚಾಲ್ತಿಯಲ್ಲಿರುವ ರೀಚಾರ್ಜ್‌ ಪ್ಲಾನ್‌ಗಳು ಕೈಗೆಟುಕುವ ಬೆಲೆಯಲ್ಲಿವೆ. ಶೇ.93ರಷ್ಟು ಜನರ ಪ್ರಕಾರ, ಪ್ಲಾನ್‌ಗಳು ಒಳ್ಳೆಯ ಮಾರ್ಕೆಟ್ ವ್ಯಾಲ್ಯೂ ಹೊಂದಿವೆ. ಈಗಾಗಲೇ ಎಲ್ಲಾ ಬಳಕೆದಾರರು ಅನ್‌ಲಿಮಿಟೆಡ್ ಕಾಲಿಂಗ್ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ. ಈ ಸಂಪರ್ಕವನ್ನು ಕಾಸ್ಟ್‌ ಇಕ್ವಿಟಿಯಾಗಿ ಪರಿಗಣಿಸುತ್ತಿದ್ದಾರೆ.

ಜಿಯೋದಿಂದ ಮಹತ್ವದ ಘೋಷಣೆ: 3 ತಿಂಗಳು ಅನ್‌ಲಿಮಿಟೆಡ್‌ ಕಾಲ್ ಜೊತೆ ಡೇಟಾ ಪ್ಲಾನ್, ಬೆಲೆ ಜಸ್ಟ್ 1 ರೂಪಾಯಿ

TRAI ಮುಂದೆ Vodaphone Idea ಹೇಳಿದ್ದೇನು?
ಕೇವಲ ಕಾಲಿಂಗ್ ಅಥವಾ ಎಸ್‌ಎಂಎಸ್ ಗಾಗಿ ಪ್ರತ್ಯೇಕ ರೀಚಾರ್ಜ್ ಪ್ಲಾನ್ ಪ್ರಕಟಿಸಿದ್ರೆ  ಜನರು ಡಿಜಿಟಲ್ ಯುಗದಿಂದ ಹಿಂದಕ್ಕೆ ತಳ್ಳಿದಂತೆ ಆಗುತ್ತದೆ. ಡೇಟಾ ಬಳಕೆ ಮಾಡದ ವರ್ಗದ ಬಳಕೆದಾರರನ್ನು ನಿರುತ್ಸಾಹಗೊಳಿಸಿದಂತೆ ಆಗಲಿದೆ ಎಂದು ವೊಡಾಫೋನ್ ಐಡಿಯಾ ಹೇಳಿದೆ.

ಡೇಟಾ ಇಂದಿನ ಟೆಲಿಕಾಂ ಕಂಪನಿಗಳು ನೀಡುತ್ತಿರುವ ಪ್ರಮುಖ ಸೇವೆಯಾಗಿದೆ. ಅನಿಯಮಿತ ಡೇಟಾ ಮತ್ತು ಕರೆಯ ಪ್ಲಾನ್‌ಗಳು ಹಿಂದಿನ ಮಾದರಿಗಿಂತ ಉತ್ತಮವಾಗಿವೆ ಎಂದು ಎಲ್ಲಾ ಟೆಲಿಕಾಂ ಕಂಪನಿಗಳು ಏಕೀಕೃತ ನಿರ್ಧಾರದ ಹೇಳಿಕೆಯನ್ನು ಟ್ರಯ್ ಮುಂದೆ ಇರಿಸಿವೆ. ಒಂದು ವೇಳೆ ಈ ವ್ಯಬಸ್ಥೆಯಲ್ಲಿ ವ್ಯತ್ಯಾಸವಾದ್ರೆ ಬಳಕೆದಾರರು ತೊಂದರೆ ಅನುಭವಿಸಬಹುದು ಎಂದು ಟೆಲಿಕಾಂ ಕಂಪನಿಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ ಈ ಬಗ್ಗೆ TRAI ಇನ್ನೂ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ. ಮುಂದೆ ಏನಾಗಬಹುದು ಎಂದು ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದಾರೆ.

ಮತ್ತೆ ಆಟ ಬದಲಿಸಿದ ಜಿಯೋ, ನೆಟ್‌ಫ್ಲಿಕ್ಸ್‌ ಜೊತೆ ಎರಡು ಧಮಾಕಾ ಆಫರ್ ಘೋಷಣೆ! 

Latest Videos
Follow Us:
Download App:
  • android
  • ios