ಬೆಂಗಳೂರು (ಸೆ.30): ಕಾವೇರಿ ವಿಚಾರದಲ್ಲಿ ಕರ್ನಾಟಕದ ವಾದಕ್ಕೆ ಮನ್ನಣೆ ನೀಡದ ಸುಪ್ರೀಂಕೋರ್ಟ್ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿದೆ. ಕರ್ನಾಟಕ್ಕೆ ಮತ್ತೊಮ್ಮೆ ಹಿನ್ನೆಡೆಯಾಗಿದೆ.

ಸಂವಿಧಾನದ ಪರಿಚ್ಚೇದ 143 ರ ಅಡಿಯಲ್ಲಿ ರಾಷ್ಟ್ರಪತಿಯವರಿಗೆ ಮಧ್ಯಪ್ರವೇಶಿಸಲು ವಿಶೇಷ ಅಧಿಕಾರವಿದೆ. ಸುಪ್ರೀಂ ಆದೇಶಗಳ ಬಗ್ಗೆ ಆಕ್ಷೇಪ ಎತ್ತಿ ದೂರು ನೀಡಿದರೆ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬಹುದು.

ಆಗ ಪ್ರಕರಣದ ಗಂಭೀರತೆ ಆಧಾರದ ಮೇಲೆ ಅದನ್ನು ಪರಿಶೀಲಿಸುವಂತೆ ರಾಷ್ಟ್ರಪತಿಯವರು ಸುಪ್ರೀಂಗೆ ಸಲಹೆ ನೀಡಬಹುದು. ಆಗ ನ್ಯಾಯಾಲಯ ಮರುಪರಿಶೀಲಿಸಿ ಅಭಿಪ್ರಾಯವನ್ನು ರಾಷ್ಟ್ರಪತಿಯವರಿಗೆ ತಿಳಿಸಬೇಕಾಗುತ್ತದೆ. ಆಗ ಅಭಿಪ್ರಾಯ ಆಧರಿಸಿ ಅವರು ಮುಂದಿನ ನಿರ್ಧಾರ ಕೈಗೊಳ್ಳಬಹುದು.

ಕಾವೇರಿ ವಿಚಾರದಲ್ಲಿ ರಾಷ್ಟ್ರಪತಿ ನೆರವು ನೀಡುತ್ತಾರಾ ಎನ್ನುವುದು ಮುಂದಿನ ಪ್ರಶ್ನೆಯಾಗಿದೆ.