ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಹಜ ಎನ್ನುವಂತೆ ಮುಂದುವರೆಸಲು ಒಪ್ಪಿಕೊಳ್ಳುವುದಿಲ್ಲವೆಂದು  ಭಾರತ ಪಾಕಿಸ್ತಾನಕ್ಕೆ ಖಡಕ್ ಸಂದೇಶ ಕಳುಹಿಸಿದೆ.

ನವದೆಹಲಿ (ಡಿ.01): ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಹಜ ಎನ್ನುವಂತೆ ಮುಂದುವರೆಸಲು ಒಪ್ಪಿಕೊಳ್ಳುವುದಿಲ್ಲವೆಂದು ಭಾರತ ಪಾಕಿಸ್ತಾನಕ್ಕೆ ಖಡಕ್ ಸಂದೇಶ ಕಳುಹಿಸಿದೆ.

“ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಿ. ನಂತರ ನಾವು ಮಾತುಕತೆ ನಡೆಸುತ್ತೇವೆ” ಎಂದು ಭಾರತೀಯ ವಿದೇಶಾಂಗ ಇಲಾಕೆ ಪಾಕ್ ಗೆ ಹೇಳಿದೆ.

ಎರಡು ದಿನಗಳ ಹಿಂದಷ್ಟೇ ನಡೆದ ನಾಗ್ರೋಟಾ ಭಯೋತ್ಪಾದಕ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತಾ, “ಮುಂದಿನ ಕ್ರಮ ಕೈಗೊಳ್ಳುವ ಮುನ್ನ ದಾಳಿಯ ಬಗ್ಗೆ ನಿಖರ ಮಾಹಿತಿ ಪಡೆಯಲು ಕಾಯುತ್ತಿದ್ದೇವೆ. ಸರ್ಕಾರ ನಾಗ್ರೋಟಾ ದಾಳಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಿದೆ" ಎಂದು ವಿದೇಶಾಂಗ ಇಲಾಖೆ ಹೇಳಿದೆ.