Asianet Suvarna News Asianet Suvarna News

ಕ್ರಿಕೆಟರ್ ನವಜೋತ್ ಸಿಧು ಜೈಲಿಗೆ ಹೋಗ್ತಾರಾ ?

1988 ರಲ್ಲಿ ಸಿಧು ಗಲಾಟೆಯೊಂದರ  ಪ್ರಕರಣದಲ್ಲಿ ಅಪರಾಧಿಯಾಗಿದ್ದು 304[2] ಸೆಕ್ಷನ್ ಅನ್ವಯ ಹತ್ಯೆಯಲ್ಲದ ಶಿಕ್ಷಾರ್ಹ ನರಹತ್ಯೆಯಾಗಿದೆ ಎನ್ನಲಾಗಿದೆ.

Will Navjot Singh Sidhu be jailed? Supreme Court re-opens road rage case
Author
Bengaluru, First Published Sep 12, 2018, 7:13 PM IST

ನವದೆಹಲಿ[ಸೆ.12]: ಮಾಜಿ ಕ್ರಿಕೆಟರ್ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.

ಸಿಧು ಅವರ 1988ರ ಗಲಾಟೆಯೊಂದರ ಪ್ರಕರಣಕ್ಕೆ ಮರುಜೀವ ನೀಡಲು ಸುಪ್ರಿಂ ಕೋರ್ಟ್ ಚಿಂತಿಸಿದ್ದು, ಮಾಜಿ ಕ್ರಿಕೆಟರ್ ಜೈಲಿಗೆ ಹೋಗೊ ಭವಿಷ್ಯ ಶೀಘ್ರದಲ್ಲೇ ನಿರ್ಧಾರವಾಗಲಿದೆ.

ಈ ಪ್ರಕರಣದ ಮರು ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಧು ಅವರಿಗೆ ನೋಟಿಸ್ ನೀಡಿದೆ. ನ್ಯಾಯಮೂರ್ತಿ ಎ.ಎಂ.ಕಾನ್ವಿಲ್ಕರ್ ಹಾಗೂ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ನೋಟಿಸ್ ವಿತರಿಸುವ ಆದೇಶ ನೀಡಿದೆ. 1988 ರಲ್ಲಿ ಗಲಾಟೆಯೊಂದರ  ಪ್ರಕರಣದಲ್ಲಿ ಅಪರಾಧಿಯಾಗಿದ್ದು 304[2] ಸೆಕ್ಷನ್ ಅನ್ವಯ ಹತ್ಯೆಯಲ್ಲದ ಶಿಕ್ಷಾರ್ಹ ಅಪರಾಧವಾಗಿದೆ ಎನ್ನಲಾಗಿದೆ.

1988 ಡಿಸೆಂಬರ್ 27 ರಂದು ಪಾಟಿಯಾಲದಲ್ಲಿ ಸಿಧು ಅವರು  65 ವರ್ಷದ ಗುರ್ನಾಮ್ ಸಿಂಗ್ ಎಂಬ ವೃದ್ಧರ ಮೇಲೆ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಆ ವೃದ್ಧ ಕೆಲ ದಿನಗಳ ನಂತರ ಮೃತಪಟ್ಟಿದ್ದರು. ನ್ಯಾಯಾಲಯದಲ್ಲಿ 10 ವರ್ಷಗಳ ವಿಚಾರಣೆ ನಡೆದು ಸಾಕ್ಷಾಧಾರಗಳ ಕೊರತೆಯಿಂದ 1999ರಲ್ಲಿ ಸಿಧು ಅವರನ್ನು ಖುಲಾಸೆಗೊಳಿಸಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸುಪ್ರಿಂ ಕೋರ್ಟ್ ನಲ್ಲಿ ಮತ್ತೇ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಪ್ರಕರಣಕ್ಕೆ ಶಿಕ್ಷೆ ವಿಧಿಸಿದರೆ ಸಿಧು ಅವರು 3 ವರ್ಷಗಳ ಕಾಲ ಸೆರೆವಾಸ ಅನುಭವಿಸಬೇಕಾಗುತ್ತದೆ.

Follow Us:
Download App:
  • android
  • ios