ಕಳೆದೊಂದು ತಿಂಗಳಿನಿಂದ ಬಿಹಾರದ ಆಡಳಿತಾರೂಢ ಜೆಡಿಯು- ಆರ್‌ಜೆಡಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹುತೇಕ ಅಂತಿಮ ಹಂತ ತಲುಪಿದ್ದು, ಆರ್‌ಜೆಡಿ ಜೊತೆಗಿನ ಮೈತ್ರಿ ಮುರಿಯಲು, ಬಿಹಾರ ಸಿಎಂ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪಟನಾ(ಜು.17): ಕಳೆದೊಂದು ತಿಂಗಳಿನಿಂದ ಬಿಹಾರದ ಆಡಳಿತಾರೂಢ ಜೆಡಿಯು- ಆರ್‌ಜೆಡಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹುತೇಕ ಅಂತಿಮ ಹಂತ ತಲುಪಿದ್ದು, ಆರ್‌ಜೆಡಿ ಜೊತೆಗಿನ ಮೈತ್ರಿ ಮುರಿಯಲು, ಬಿಹಾರ ಸಿಎಂ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ, ಭಾನುವಾರ ಆರ್‌ಜೆಡಿ ಮತ್ತು ಜೆಡಿಯು ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಗಿಂತ ಹೆಚ್ಚಾಗಿ, ರಾಜ್ಯ ರಾಜಕೀಯದ ಕುರಿತೇ ಚರ್ಚೆ ನಡೆಯಿತು ಎನ್ನಲಾಗಿದೆ. ಆರ್‌ಜೆಡಿ ಸಭೆಯಲ್ಲಿ, ಈ ಹಿಂದಿನಂತೆಯೇ ಡಿಸಿಎಂ ತೇಜಸ್ವಿ ಯಾದವ್ ಅವರ ರಾಜೀನಾಮೆ

ಪಡೆಯದೇ ಇರುವ ನಿರ್ಧಾರಕ್ಕೆ ಪಕ್ಷ ಬಂದಿದೆ. ಮತ್ತೊಂದೆಡೆ ಈ ಮಾಹಿತಿ ಪಡೆದ ಬಿಹಾರ ಸಿಎಂ, ಜೆಡಿಯು ನಾಯಕ ನಿತೀಶ್ ಕುಮಾರ್, ಭ್ರಷ್ಟಾಚಾರ ಪ್ರಕರಣದಲ್ಲಿ ಆರ್‌ಜೆಡಿ ಕಠಿಣ ನಿಲುವು ತಳೆಯದ ಕಾರಣ, ಅವರೊಂದಿಗಿನ ಮೈತ್ರಿ ಮುರಿದುಕೊಳ್ಳುವುದೇ ಒಳಿತು ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಮೈತ್ರಿ ಮುರಿದು ಬಿದ್ದಿದ್ದೇ ಆದಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಎದುರಿಸಲು ಮಹಾಮೈತ್ರಿ ಮಾಡಿಕೊಳ್ಳಲು ಉದ್ದೇಶಿಸಿದ್ದ ಕಾಂಗ್ರೆಸ್‌ನ ಕನಸಿಗೆ ಭಾರೀ ಹೊಡೆತ ಬೀಳಲಿ