ಜೆಡಿಎಸ್ ನಿಂದ ಸಚಿವ ಸ್ಥಾನಕ್ಕೆ ಇಬ್ಬರು ರಾಜೀನಾಮೆ ?

will GT Devegowda, Puttaraju quit Ministerial Post
Highlights

ಈಗಾಗಲೇ ಸಚಿವ ಸಂಪುಟ ರಚನೆ ಮಾಡಿ ಖಾತೆಗಳನ್ನು ಹಂಚಿಕೆ ಮಾಡಿದ್ದರೂ ಕೂಡ ಅಸಮಾಧಾನ ಮಾತ್ರ ಶಮನವಾಗಿಲ್ಲ. ಕಾಂಗ್ರೆಸ್ ನಲ್ಲಿ ಹುಟ್ಟಿಕೊಂಡಿದ್ದ ಬಿಸಿ ಇದೀಗ ಖಾತೆ ಹಂಚಿಕೆ ಬಳಿಕ ಜೆಡಿಎಸ್ ನಲ್ಲಿಯೂ ಕೂಡ ಭುಗಿಲೆದ್ದಿದೆ. 

ಬೆಂಗಳೂರು : ಈಗಾಗಲೇ ಸಚಿವ ಸಂಪುಟ ರಚನೆ ಮಾಡಿ ಖಾತೆಗಳನ್ನು ಹಂಚಿಕೆ ಮಾಡಿದ್ದರೂ ಕೂಡ ಅಸಮಾಧಾನ ಮಾತ್ರ ಶಮನವಾಗಿಲ್ಲ. ಕಾಂಗ್ರೆಸ್ ನಲ್ಲಿ ಹುಟ್ಟಿಕೊಂಡಿದ್ದ ಬಿಸಿ ಇದೀಗ ಖಾತೆ ಹಂಚಿಕೆ ಬಳಿಕ ಜೆಡಿಎಸ್ ನಲ್ಲಿಯೂ ಕೂಡ ಭುಗಿಲೆದ್ದಿದೆ. 

ಅಸಮಾಧಾನಗೊಂಡ ಜೆಡಿಎಸ್ ನ ಇಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನಲಾಗಿದೆ.   ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿರುವ ಜಿ.ಟಿ ದೇವೇಗೌಡ ಹಾಗೂ ಪುಟ್ಟರಾಜು ಅವರ ಬೆಂಬಲಿಗರಿಂದ ಅಸಮಾಧಾನ ಸ್ಫೊಟಗೊಂಡಿದೆ. 

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರ ಬೆಂಬಲಿಗರೇ ಸ್ವತಃ ಆಗ್ರಹಿಸಿದ್ದಾರೆ. ಇಂದು ಜಿಟಿಡಿ ಮನೆ ಮುಂದೆ ಬೆಂಬಲಿಗರಿಂದ ಪ್ರತಿಭಟನೆಯೂ ಕೂಡ ನಡೆಯಲಿದೆ. ಜೆಡಿಎಸ್ ವರಿಷ್ಟ ವಿರುದ್ಧ ಈ ಪ್ರತಿಭಟನೆ  ನಡೆಸಲಾಗುತ್ತದೆ.  

ಜೆಡಿಎಸ್ ಮುಖಂಡ ಮುಖ್ಯಮಂತ್ರಿ  ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆ ಸುಳ್ಳಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸರಿಸಮಾನಾದ ಅಧಿಕಾರ ನೀಡುವುದಾಗಿ ಹೇಳಿದ್ದರು.  ಈಗ ಜಿಟಿಡಿ ಅವರಿಗೆ ಕೇಳಿದ ಖಾತೆ ಸಿಕ್ಕಿಲ್ಲ. ಖಾತೆ ಕೊಡುವುದಕ್ಕು ಮುನ್ನ ಸಮಾಲೋಚನೆ ಸಹ ನಡೆಸಿಲ್ಲ. ವರಿಷ್ಟರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಪ್ತರ ಬಳಿ ಜಿಟಿಡಿ ಅವರೂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. 

ಇನ್ನು ಜಿಟಿ ದೇವೇಗೌಡ ಅವರು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಸರ್ಕಾರಿ ಕಾರನ್ನು  ನಿನ್ನೆಯೇ ವಾಪಸ್ ಕೊಟ್ಟಿದ್ದಾರೆ.

loader