ನಾನು ಅವರ ಅತಿ ಸಮೀಪದ ವ್ಯಕ್ತಿ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ರಾಜಿನಾಮೆ ಅಂಗೀಕರಿಸಿದರೆ ನಾನೂ ಅವರ ಹಾದಿಯನ್ನೇ ತುಳಿಯುವೆ ಎಂದು ಹೇಳಿದ್ದಾರೆ.

ಚಿಕ್ಕೋಡಿ (ಜ.29): ಮಾಜಿ ಸಿಎಂ ಎಸ್​.ಎಂ.ಕೃಷ್ಣರ ರಾಜಿನಾಮೆಗೆ ಪ್ರತಿಕ್ರಿಯಿಸಿರುವ ಚಿಕ್ಕೋಡಿ ಸಂಸದ ಪ್ರಕಾಶ್​​ ಹುಕ್ಕೇರಿ, ನಾನು ಅವರ ಅತಿ ಸಮೀಪದ ವ್ಯಕ್ತಿ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ರಾಜಿನಾಮೆ ಅಂಗೀಕರಿಸಿದರೆ ನಾನೂ ಅವರ ಹಾದಿಯನ್ನೇ ತುಳಿಯುವೆ ಎಂದು ಹೇಳಿದ್ದಾರೆ.

ನಾಳೆ ಅವರನ್ನು ಭೇಟಿ ಮಾಡಿ ಮನವೊಲಿಸುತ್ತೇನೆ ಎಂದು ಹುಕ್ಕೇರಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಚಿತ್ರನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್, ನಾನು ರಾಜಕಾರಣಕ್ಕೆ ಬರಲು ಎಸ್.ಎಂ.ಕೃಷ್ಣ ಅವರೇ ಕಾರಣ. ಅವರು ಅಪರೂಪದ ರಾಜಕಾರಣಿ. ಇಂದಿನ ಯುವಪೀಳಿಗೆಯ ರಾಜಕಾರಣಿಗಳಿಗೆ ಮಾದರಿ. ಅವರು ಕಾಂಗ್ರೆಸ್ ತ್ಯಜಿಸಿದ್ದೆ ನನಗೆ ಆಶ್ಚರ್ಯ ಎಂದು ಹೇಳಿದ್ದಾರೆ.