ತ್ರಿವಳಿ ತಲಾಖ್ ಪದ್ದತಿಯನ್ನು ಒಂದೂವರೆ ವರ್ಷಗಳೊಳಗೆ ಕೊನೆಗೊಳಿಸಲು ಮಂಡಳಿ ಸಿದ್ಧವಾಗಿದೆ, ಆದರೆ ಸರ್ಕಾರ ಮುಸ್ಲಿಮ್ ವೈಯುಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಅವರು ಹೇಳಿದ್ದಾರೆ.
ಬಿಜ್ನೋರ್ (ಏ.11): ಮುಸ್ಲಿಮರಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಕ್ ಪದ್ದತಿಗೆ ಅಂತ್ಯಹಾಡುವುದಾಗಿ ಅಖಿಲ ಭಾರತೀಯ ಮುಸ್ಲಿಮ್ ವೈಯುಕ್ತಿಕ ಕಾನೂನು ಮಂಡಳಿ (ಏಐಎಂಪಿಎಲ್’ಬಿ) ಉಪಾಧ್ಯಕ್ಷ ಮೌಲಾನ ಕಲ್ಬೆ ಸಾದಿಕ್ ಹೇಳಿದ್ದಾರೆ.
ತ್ರಿವಳಿ ತಲಾಖ್ ಪದ್ದತಿಯನ್ನು ಒಂದೂವರೆ ವರ್ಷಗಳೊಳಗೆ ಕೊನೆಗೊಳಿಸಲು ಮಂಡಳಿ ಸಿದ್ಧವಾಗಿದೆ, ಆದರೆ ಸರ್ಕಾರ ಮುಸ್ಲಿಮ್ ವೈಯುಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಅವರು ಹೇಳಿದ್ದಾರೆ.
ತ್ರಿವಳಿ ತಲಾಖ್ ಪದ್ದತಿಯಿಂದ ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಅದು ವೈಯುಕ್ತಿಕ ವಿಷಯವಾಗಿರುವುದರಿಂದ ಖುದ್ದಾಗಿ ಪರಿಹರಿಸಿಕೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
ಗೋಹತ್ಯೆ ಕುರಿತು ಮಾತನಾಡಿದ ಮೌಲಾನ ಸಾದಿಕ್, ಸರ್ಕಾರವು ಗೋಹತ್ಯೆಯನ್ನು ನಿಷೇಧಿಸಿದರೆ ಮುಸಲ್ಮಾನರು ಆ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಕೃತ್ಯಗಳನ್ನು ತಡೆಯಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಗೋಮಾಂಸ ತಿನ್ನಬೇಕೆಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿಲ್ಲ, ಆದುದರಿಂದ ಮುಸ್ಲಿಮರು ಗೋಮಾಂಸ ಸೇವಿಸುವುದನ್ನು ಬಿಟ್ಟುಬಿಡಬೇಕೆಂದು ಅವರು ಕರೆ ನೀಡಿದ್ದಾರೆ.