ಗುಂಟೂರು : ಜನಸಂಖ್ಯಾ ನಿಯಂತ್ರಣಕ್ಕೆ ಗುಡ್ ಬೈ ಹೇಳಿ, ಹೆಚ್ಚಿನ ಯುವಜನರನ್ನು ಸೃಷ್ಟಿ ಮಾಡುವ ಅಗತ್ಯವಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ  ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ. 

ಈಗಾಗಲೇ ತಮ್ಮ ಸರ್ಕಾರ ಇಬ್ಬರಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿದವರು ಚುನಾವಣೆಗೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುವ  ನಿಯಮವನ್ನು ಈಗಾಲೇ ತೆಗೆದು ಹಾಕಲಾಗಿದೆ ಎಂದಿದ್ದಾರೆ. 

ನೆಲಪಾಡು ಹಳ್ಳಿಯಲ್ಲಿ ಮಹಿಳಾ ಸ್ವಸಹಾಯ ಸಂಘದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವ ದಂಪತಿ ಹೆಚ್ಚಿನ ಮಕ್ಕಳನ್ನು ಪಡೆಯಲು ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದ್ದಾರೆ.  ಅಲ್ಲದೇ ಮೂರರಿಂದ ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದು ಅವರು ಈ ವೇಳೆ ಸಲಹೆ ನೀಡಿದ್ದಾರೆ. 

ದೇಶಕ್ಕೆ ಯುವಜನತೆಯೇ ಶಕ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ನಾವು ಸೃಷ್ಟಿ ಮಾಡುವ ಅಗತ್ಯವಿದೆ.  ಇದರಿಂದ ಆರ್ಥಿಕಾಭಿವೃದ್ಧಿಯನ್ನೂ ಕೂಡ ಹೆಚ್ಚು ಏರಿಕೆ ಮಾಡಬಹುದು. ಈಗಾಗಲೇ ಅನೇಕ ದೇಶಗಳು ಜನಸಂಖ್ಯೆಯ ಕುಸಿತದಿಂದ ಕಂಗಾಲಾಗುತ್ತಿವೆ. ಆದ್ದರಿಂದ ಹೆಚ್ಚಿನ ಮಕ್ಕಳನ್ನು ಪಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.