ತಿರುಪತಿಯಲ್ಲಿ ಆಭರಣ ಕಣ್ಮರೆಗೆ ಟ್ವಿಸ್ಟ್ : ಸಾರ್ವಜನಿಕ ಪ್ರದರ್ಶನಕ್ಕೆ ಸಿದ್ಧ

Will display jewels if shastras permit Tirumala Tirupati Devasthanams
Highlights

ಆಭರಣ ಪ್ರಕರಣಗಳ ಕಾರಣಕ್ಕಾಗಿ ಇತ್ತೀಚಗೆ ವಜಾಗೊಂಡ ಪ್ರಧಾನ ಅರ್ಚಕ ರಮಣ ದಿಕ್ಷೀತಲು ಕಣ್ಮರೆ ಪ್ರಕರಣ ಹಾಗೂ 1996ರಿಂದಲೂ ಕಣ್ಮರೆಯಾಗಿರುವ ಆಭರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕೆಂದು ಆಗ್ರಹಿಸಿದ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. 

ತಿರುಪತಿ(ಮೇ.21): ತಿರುಮಲದಲ್ಲಿ ಆಭರಣ ಕಣ್ಮರೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು ಆಗಮ ಶಾಸ್ತ್ರ ಅನುಮತಿ ನೀಡಿದರೆ ಅನುಮಾನಗಳಿಗೆ ಕಾರಣವಾಗಿರುವ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದಾಗಿ ತಿರುಪತಿ ತಿರುಮಲ ದೇಗುಲ ಟ್ರಸ್ಟ್'ನ  ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ.  
ಆಭರಣ ಪ್ರಕರಣಗಳ ಕಾರಣಕ್ಕಾಗಿ ಇತ್ತೀಚಗೆ ವಜಾಗೊಂಡ ಪ್ರಧಾನ ಅರ್ಚಕ ರಮಣ ದಿಕ್ಷೀತಲು ಕಣ್ಮರೆ ಪ್ರಕರಣ ಹಾಗೂ 1996ರಿಂದಲೂ ಕಣ್ಮರೆಯಾಗಿರುವ ಆಭರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕೆಂದು ಆಗ್ರಹಿಸಿದ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.  ಸರ್ಕಾರ, ಆಡಳಿತ ಮಂಡಳಿ ವಿರುದ್ಧ ತಿರುಗಿಬಿದ್ದಿರುವ ರಮಣ ದೀಕ್ಷಿತಲು ಟಿಟಿಡಿಯ ಎಲ್ಲಾ  ವ್ಯವಹಾರಗಳನ್ನು ಆರ್ ಟಿ ಐ ವ್ಯಾಪ್ತಿಗೆ ತರಲು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಘಾಲ್, ದೇಗುಲದ ಆಭರಣಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಆಗಮ ಶಾಸ್ತ್ರಗಳು ಅನುಮತಿ ನೀಡುವುದಿಲ್ಲ. ಈ ಕಾರಣದಿಂದ ಎಲ್ಲ ಒಡವೆಗಳನ್ನು 3ಡಿ ಮಾದರಿಯಲ್ಲಿ ಡಿಜಿಟಲಿಕರಣಗೊಳಿಸಿ ಎಲ್ಲ ಭಾವಚಿತ್ರಗಳನ್ನು ಸಾರ್ವಜನಿಕ ವೀಕ್ಷಣಗೆ ಸಂಗ್ರಹಿಸಲಿಡಲಾಗುವುದು. ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಅಲ್ಲದೆ ರಮಣ ದಿಕ್ಷೀತಲು ಅವರ ಆರೋಪಗಳನ್ನು ತಳ್ಳಿಹಾಕಿದರು.

loader