ಮೊದಲ ಬಾರಿಗೆ ಪೂರ್ಣಾವಧಿಯ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್ ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ನೀಡಲಾಗುವುದು. ಸೇನಾ ಸನ್ನದ್ಧತೆ, ರಕ್ಷಣಾ ಒಪ್ಪಂದಗಳನ್ನು ತ್ವರಿತವಾಗಿ ನಿರ್ವಹಿಸುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.
ನವದೆಹಲಿ (ಸೆ.07): ಮೊದಲ ಬಾರಿಗೆ ಪೂರ್ಣಾವಧಿಯ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್ ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ನೀಡಲಾಗುವುದು. ಸೇನಾ ಸನ್ನದ್ಧತೆ, ರಕ್ಷಣಾ ಒಪ್ಪಂದಗಳನ್ನು ತ್ವರಿತವಾಗಿ ನಿರ್ವಹಿಸುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದಿದ್ದಾರೆ.
ದೇಶದ ರಕ್ಷಣಾ ಮಂತ್ರಿಯಾಗಿ ಗಡಿಯಾರದಂತೆ ಕೆಲಸ ಮಾಡುತ್ತೇನೆ. 24 ಗಂಟೆಯೂ ರಕ್ಷಣಾ ಮಂತ್ರಿಯಾಗಿರುತ್ತೇನೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡಲಾಗುವುದು. ದೇಶದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳನ್ನು ನಾವು ಹೆಚ್ಚು ಹೆಚ್ಚು ಬಳಸುತ್ತೇವೆ. ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಯುದ್ದೋಪಕರಣಗಳನ್ನು ಮೇಕ್ ಇಂಡಿಯಾದಲ್ಲೇ ತಯಾರು ಮಾಡಲು ಒತ್ತು ನೀಡಲಾಗುವುದು ಎಂದಿದ್ದಾರೆ.
ರಕ್ಷಣಾ ಒಪ್ಪಂದಗಳು ಮತ್ತು ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲಾಗುವುದು. ಸೇನೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಸೈನಿಕರ ಅಗತ್ಯಗಳನ್ನು ಕೂಡಲೇ ಪೂರೈಸಲಾಗುವುದು. ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಬಗೆಹರಿಸುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
