ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯದ ಕಲ್ಕೆರೆ ವಲಯದಲ್ಲಿ ನೂರಾರು ಎಕರೆ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದೆ.

ಚಾಮರಾಜನಗರ (ಫೆ.19): ಕಾಡ್ಗಿಚ್ಚು ನಂದಿಸಲು ಹೋದ ಫಾರೆಸ್ಟ್ ಗಾರ್ಡ್, ಉಸಿರುಗಟ್ಟಿ ಸಾವಿಗೀಡಾದ ದಾರುಣ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯದ ಕಲ್ಕೆರೆ ವಲಯದಲ್ಲಿ ನೂರಾರು ಎಕರೆ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದೆ.

ಈ ವೇಳೆ ಕಾಡ್ಗಿಚ್ಚನ್ನು ನಂದಿಸಲು ಹೋದ ವಿಜಯಪುರ ಮೂಲದ ಫಾರೆಸ್ಟ್ ಗಾರ್ಡ್ ಮುರುಗಪ್ಪ ಹೊಗೆ ಮಾಲಿನ್ಯಕ್ಕೆ ಬಲಿಯಾಗಿದ್ದಾನೆ. ಅರಣ್ಯ ಸಿಬ್ಬಂದಿ ಭಾರೀ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.