ಲೆಫ್ಟಿನೆಂಟ್ ಕಲೋನಿಲ್ ಪುರೋಹಿತ್ ಪತ್ನಿ ಅಪರ್ಣಾ ಪುರೋಹಿತ್’ಗೆ ಇದು ಅತ್ಯಂತ ಭಾವನಾತ್ಮಕ ಘಳಿಗೆ. ಸತತ 9 ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ತಮ್ಮ ಪತಿಗೆ ಸುಪ್ರೀಂಕೋರ್ಟ್’ನಿಂದ ಕಡೆಗೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿ (ಆ.21): ಲೆಫ್ಟಿನೆಂಟ್ ಕಲೋನಿಲ್ ಪುರೋಹಿತ್ ಪತ್ನಿ ಅಪರ್ಣಾ ಪುರೋಹಿತ್’ಗೆ ಇದು ಅತ್ಯಂತ ಭಾವನಾತ್ಮಕ ಘಳಿಗೆ. ಸತತ 9 ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ತಮ್ಮ ಪತಿಗೆ ಸುಪ್ರೀಂಕೋರ್ಟ್’ನಿಂದ ಕಡೆಗೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತಿಗೆ ಜಾಮೀನು ಸಿಕ್ಕ ವಿಚಾರ ಹೊರಬೀಳುತ್ತಿದ್ದಂತೆ ಅಪರ್ಣಾ ಪುರೋಹಿತ್ ಭಾವುಕರಾಗಿ ಕಂಬನಿ ಮಿಡಿದಿದ್ದಾರೆ. ನನಗೆ ಬಹಳ ಸಂತೋಷವಾಗುತ್ತಿದೆ. ನ್ಯಾಯಾಲಯಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಯಜಮಾನರು ಮನೆಗೆ ಬರುತ್ತಿದ್ದಾರೆಂದು ಸಂತೋಷವಾಗುತ್ತಿದೆ. ಇದು ಕೇವಲ ಜಾಮೀನಾದರೂ ಕನಿಷ್ಠ ಪಕ್ಷ ಮಕ್ಕಳ ಜೊತೆ ಕಾಲಕಳೆಯಲಿದ್ದಾರೆ ಎಂದು ಭಾವುಕರಾದರು.

2008 ರ ಮಾಲೆಗಾಂವ್ ಸ್ಪೋಟದ ಪ್ರಮುಖ ಆರೋಪಿ ಪ್ರಸಾದ್ ಶ್ರೀಕಾಂತ್ ಪುರೋಹಿತ್’ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಾಮೀನನ್ನು ನೀಡಿದೆ.

ಪೊರೋಹಿತ್ ಪರ ವಾದ ಮಂಡಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರಕರಣದಿಂದ ಬಿಡುಗಡೆಗೊಳಿಸಿ ಎಂದು ನಾವು ಕೇಳುತ್ತಿಲ್ಲ. ಮಧ್ಯಂತರ ಜಾಮೀನು ನೀಡಿ ಎಂದು ನ್ಯಾಯಾಲಯಕ್ಕೆ ಕೇಳಿಕೊಂಡರು.

ಚಿತ್ರ ಕೃಪೆ : (ಎಎನ್ಐ)