ಜನರ ಮುಲಾಜಿನಲ್ಲಿಲ್ಲ ಅಂದ್ರೆ ಸಿಎಂ ಯಾಕಾದ್ರಿ?: ವಾಟಾಳ್‌ ಪ್ರಶ್ನೆ

Why you became CM if not liable to people of Karnataka asks Vatal Nagaraj to CM H D Kumaraswamy
Highlights

ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎನುತ್ತಿದ್ದಾರೆ. ಜನರ ಮುಲಾಜಿನಲ್ಲಿಲ್ಲ ಅಂದರೆ ಸಿಎಂ ಏಕೆ ಆದರು. ರೈತರ ಸಾಲಮನ್ನಾ ಮಾಡದಿದ್ದರೆ, ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಸವಾಲು ಹಾಕಿದರು.

- ಸಾಲಮನ್ನಾ ಮಾಡದಿದ್ರೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ

- ನಟ ರಜನಿಕಾಂತ್‌, ಕಮಲ್‌ ಕನ್ನಡದ್ರೋಹಿಗಳು, ಅವರ ಸಿನಿಮಾ ಬಿಡುಗಡೆಗೆ ಅವಕಾಶ ನೀಡಲ್ಲ

ಕೊಪ್ಪಳ: ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎನುತ್ತಿದ್ದಾರೆ. ಜನರ ಮುಲಾಜಿನಲ್ಲಿಲ್ಲ ಅಂದರೆ ಸಿಎಂ ಏಕೆ ಆದರು. ರೈತರ ಸಾಲಮನ್ನಾ ಮಾಡದಿದ್ದರೆ, ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಸವಾಲು ಹಾಕಿದರು.

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಮತಯಾಚಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಲಮನ್ನಾ ವಿಷಯದಲ್ಲಿ ಈ ಮೈತ್ರಿ ಸರ್ಕಾರ ಯಾವುದೇ ನಾಟಕ ಮಾಡಬಾರದು. ಕುಮಾರಸ್ವಾಮಿ ಅವರು ನಾನು ಜನರ ಮುಲಾಜಿನಲ್ಲಿಲ್ಲ ಎನ್ನುವುದಾದರೆ ಸಿಎಂ ಯಾಕಾಗಬೇಕು? ಸಿಎಂ ಸ್ಥಾನ ಬಿಟ್ಟು ಹೋಗಬೇಕು. ಕುಮಾರಸ್ವಾಮಿ ಹಾಗೂ ಅವರ ತಂದೆ ದೇವೇಗೌಡರು ಹಿಂದಿನಿಂದಲೂ ಇದನ್ನೇ ಹೇಳಿಕೊಂಡು ಬಂದಿದ್ದಾರೆ. ರಾಜ್ಯದ ರೈತರ ಪರ ಸರ್ಕಾರ ಕೂಡಲೇ ಪ್ರಾಮಾಣಿಕ ನಿರ್ಧಾರ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಮಿಶ್ರ ಸರ್ಕಾರ ರಚಿಸಲು ಅವರಿಗೆ ನಂಬಿಕೆ ಇದೆ. ನಾವಿಬ್ಬರೂ ಒಂದಾಗಿದ್ದೇವೆ ಎನ್ನುತ್ತಾರೆ. ಆದರೆ, ಸಾಲಮನ್ನಾ ವಿಚಾರದಲ್ಲಿ ಏಕೆ ನಂಬಿಕೆ ಬರುತ್ತಿಲ್ಲ. ಹಣಕಾಸು ಖಾತೆಗಾಗಿ ಜೆಡಿಎಸ್‌-ಕಾಂಗ್ರೆಸ್‌ ಬೀದಿರಂಪ ಮಾಡುತ್ತಿವೆ. ಇಬ್ಬರೂ ಸೇರಿ ಸಾಲಮನ್ನಾ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ಹೊರ ನಡೆಯಲಿ. ಮತ್ತೆ ಚುನಾವಣೆ ನಡೆದರೂ ಚಿಂತೆ ಇಲ್ಲ ಎಂದರು.

ಕಮಲ್‌, ರಜನಿಕಾಂತ್‌ ನಾಡದ್ರೋಹಿಗಳು:

ಕಾವೇರಿ ವಿಷಯದಲ್ಲಿ ಸದಾ ತಮಿಳುನಾಡು ಪರ ವಕಾಲತ್ತು ವಹಿಸುವ ತಮಿಳು ಚಿತ್ರ ನಟರಾದ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಅವರು ಕನ್ನಡದ್ರೋಹಿಗಳು. ರಜನಿಕಾಂತ್‌ ಅವರ ‘ಕಾಲ’ ಸಿನಿಮಾ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಚಿತ್ರಮಂದಿರದ ಮುಂದೆ ಗಲಾಟೆ ಮಾಡುತ್ತೇವೆ. ರಜನಿ ಹಾಗೂ ಕಮಲ್‌ ಕಾವೇರಿ ವಿಚಾರದಲ್ಲಿ ತಮಿಳುನಾಡು ಪರ ಇದ್ದಾರೆ. ಇವರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.

loader