- ಗುಜರಾತ್ ಚುನಾವಣೆ ಮತ ಎಣಿಕೆ ವೇಳೆ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್- ಅರ್ಧ ಗಂಟೇಲಿ ಶಾಗೆ ಮೂರು ಸಾರಿ ಫೋನ್ ಮಾಡಿ, ಆತಂಕ ವ್ಯಕ್ತಪಡಿಸಿದ ಮೋದಿ.- ಚುನಾವಣಾ ಸೋಲೇನು ಎಂಬುದನ್ನು ಅರಿಯದ ಮೋದಿಗೆ ಎದುರಾಗಿತ್ತು ಆತಂಕ

ಡಿಸೆಂಬರ್ 18ರ ಬೆಳಿಗ್ಗೆ 9.15ರ ಸುಮಾರಿಗೆ ಗುಜರಾತ್ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮುಂದೆ ಹೋಗಿದ್ದಾಗ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅರ್ಧ ಗಂಟೆ ಅವಧಿಯಲ್ಲಿ ಅಮಿತ್ ಶಾಗೆ ಮೂರು ಬಾರಿ ಫೋನ್ ಮಾಡಿದ್ದರಂತೆ! 

ಆದರೆ ಅಮಿತ್ ಶಾ ಇವೆಲ್ಲವೂ ಗ್ರಾಮೀಣ ಭಾಗದ ಯಂತ್ರಗಳು. ನಗರ ಭಾಗದ್ದು ಬಂದ ಮೇಲೆ ನಾವು ಮುಂದೆ ಹೋಗುತ್ತೇವೆ ಎಂದು ಸಮಜಾಯಿಷಿ ನೀಡುತ್ತಲೇ ಇದ್ದರಂತೆ. ಬೆಳಿಗ್ಗೆಯ ಟೆನ್ಷನ್ ಪರಿಣಾಮವೋ ಏನೋ, ಸಂಜೆ ಗೆಲುವಿನ ಭಾಷಣ ಮಾಡುವಾಗ ನರೇಂದ್ರ ಮೋದಿ ಮಾತು ಮಾತಿಗೊಮ್ಮೆ ಭಾವುಕರಾಗಿದ್ದಂತೆ ಕಾಣುತ್ತಿದ್ದರು. 

ಮೊದಲ ಹಂತದ ಮತದಾನ ಮುಗಿದಾಗ ಕೇಂದ್ರ ಬೇಹುಗಾರಿಕಾ ದಳ ಬಿಜೆಪಿ ಗಲ್ಲುವುದು ಕಷ್ಟವಿದೆ, ಎಂದು ಹೇಳಿತ್ತಂತೆ. ಮೋದಿಯವರ ರಾಜಕಾರಣವನ್ನು 20 ವರ್ಷಗಳಿಂದ ನೋಡುತ್ತಾ ಬಂದಿರುವ ಗುಜರಾತಿ ಪತ್ರಕರ್ತರ ಪ್ರಕಾರ 2001ರಿಂದ ಮೋದಿ ಬೇರೆ ಎಷ್ಟೇ ಕಷ್ಟ ನೋಡಿದ್ದರೂ, ಚುನಾವಣಾ ಸೋಲು ಹೇಗಿರುತ್ತದೆ ಎನ್ನುವುದನ್ನು ಕಂಡಿಲ್ಲ. ಹೀಗಾಗಿಯೇ ಪ್ರತಿಸ್ಪರ್ಧಿಗಳು ಸ್ವಲ್ಪ ಹತ್ತಿರ ಹತ್ತಿರ ಬಂದರೂ ಏಕ್ ದಂಟೆನ್ಷನ್ ಮಾಡಿಕೊಳ್ಳುತ್ತಾರಂತೆ.

(ಕನ್ನಡ ಪ್ರಭದಲ್ಲಿ ಪ್ರಕಟವಾದ ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣ ಆಯ್ದ ಭಾಗ)