ದಾವಣಗೆರೆಯಲ್ಲಿ ಮಾತನಾಡಿದ ರೇಷ್ಮೆ ನಿಗಮ ಮಂಡಳಿ ಮಾಜಿ ಅದ್ಯಕ್ಷ ಡಿ ಬಸವರಾಜ್, ಕಾಂಗ್ರೆಸ್ ಮುಖಂಡರು ನಾಯಕರ ಮನೆಗಳ ಮೇಲೆ ಮಾತ್ರ ಐಟಿ ದಾಳಿಗಳಾಗುತ್ತಿವೆ. ಐಟಿ ದಾಳಿಗಳನ್ನು ನೋಡಿದರೆ ಪ್ರಧಾನ ಮಂತ್ರಿ ಮೋದಿ ಕಾಂಗ್ರೆಸ್ ಮುಖಂಡರಿಗಷ್ಟೇ ಸುಪಾರಿ ಕೊಟ್ಟು ಬಿಜೆಪಿ ನಾಯಕರನ್ನು ರಕ್ಷಿಸುವಂತೆ ನಿರ್ದೇಶಿಸಿರುವಂತೆ ಕಾಣುತ್ತಿದೆ, ಎಂದಿದ್ದಾರೆ.
ದಾವಣಗೆರೆ (ಜ.25): ರಾಜ್ಯದಲ್ಲಿ ಸಾವಿರಾರು ಕೋಟಿ ಆಸ್ತಿ ಹೊಂದಿರುವ ಬಿಜೆಪಿ ರಾಜಕೀಯ ನಾಯಕರಿದ್ದು ಅವರ ಮನೆ, ಕಚೇರಿಗಳ ಮೇಲೆ ಏಕೆ ಐಟಿ ಅಧಿಕಾರಿಗಳು ಮೇಲೆ ನಡೆಸುತ್ತಿಲ್ಲವೆಂದು ಕಾಂಗ್ರೆಸ್ ಮುಖಂಡರು ದೂರಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ರೇಷ್ಮೆ ನಿಗಮ ಮಂಡಳಿ ಮಾಜಿ ಅದ್ಯಕ್ಷ ಡಿ ಬಸವರಾಜ್ , ಕಾಂಗ್ರೆಸ್ ಮುಖಂಡರು ನಾಯಕರ ಮನೆಗಳ ಮೇಲೆ ಮಾತ್ರ ಐಟಿ ದಾಳಿಗಳಾಗುತ್ತಿವೆ. ಐಟಿ ದಾಳಿಗಳನ್ನು ನೋಡಿದರೆ ಪ್ರಧಾನ ಮಂತ್ರಿ ಮೋದಿ ಕಾಂಗ್ರೆಸ್ ಮುಖಂಡರಿಗಷ್ಟೇ ಸುಪಾರಿ ಕೊಟ್ಟು ಬಿಜೆಪಿ ನಾಯಕರನ್ನು ರಕ್ಷಿಸುವಂತೆ ನಿರ್ದೇಶಿಸಿರುವಂತೆ ಕಾಣುತ್ತಿದೆ, ಎಂದಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್, ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು ,ಆರ್ ಅಶೋಕ್, ಸಿಟಿ ರವಿ ಶೋಭಾ ಕರಂದಾಜ್ಲೆ , ಯಡಿಯೂರಪ್ಪನವರು ನೂರಾರು ಕೋಟಿ ರೂಗಳ ಅಕ್ರಮ ಹಣ ಬೇನಾಮಿ ಆಸ್ತಿ ಹೊಂದಿದ್ದಾರೆ. ಇವರ ಮನೆಗಳ ಮೇಲೆ ಏಕೆ ಐಟಿ ದಾಳಿಗಳಾಗುತ್ತಿಲ್ಲವೆಂದು ಬಸವರಾಜ್ ಪ್ರಶ್ನಿಸಿದ್ದಾರೆ.
