Asianet Suvarna News Asianet Suvarna News

ಅಭಿನಂದನ್ ಹಸ್ತಾಂತರ ವಿಳಂಬ ಆಗಿದ್ದೇಕೆ?

ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ಅವರನ್ನು ಮಾರ್ಚ್ 1 ರಂದು ಮಧ್ಯಾಹ್ನದ ವೇಳೆ ಹಸ್ತಾಂತರಿಸಬೇಕಿತ್ತು. ಆದರೆ ಹಸ್ತಾಂತರ ಮಾಡಲು ತಡವಾಯಿತು. ಹಸ್ತಾಂತರ ತಡವಾಗಲು ಕಾರಣವೇನು..?

Why IAF Pilot Abhinanda Hand over delayed From Pakistan
Author
Bengaluru, First Published Mar 2, 2019, 9:07 AM IST

ನವದೆಹಲಿ: ಪೈಲಟ್ ಅಭಿನಂದನ್ ಅವರನ್ನು ಮಾರ್ಚ್ 1 ರಂದು ಹಸ್ತಾಂತರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಇಡೀ ದಿನ ಕಾಯುವಂತೆ ಮಾಡಿತ್ತು. ಅಭಿನಂದನ್ ಅವರನ್ನು ಪಾಕಿಸ್ತಾನ ಸಂಜೆ 5 ಗಂಟೆಗೆ ಹಸ್ತಾಂತರಿಸುವ ನಿರೀಕ್ಷೆ ಇತ್ತು. ಆ ಸಮಯದಲ್ಲಿ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ಇರುವ ಕಾರಣ ಹೆಚ್ಚಿನ ಮಾಧ್ಯಮ ಪ್ರಚಾರವನ್ನು ಪಾಕಿಸ್ತಾನ ಬಯಸಿತ್ತು. 

ಆದರೆ ಭಾರತ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ವನ್ನು ರದ್ದುಗೊಳಿಸಿದ್ದರಿಂದ ಉದ್ದೇಶ ಪೂರ್ವಕವಾಗಿ ವಿಳಂಬವಾಗಿ ಅಭಿನಂದನ್ ಅವರನ್ನು ಹಸ್ತಾಂತರಿಸಲು ನಿರ್ಧರಿಸಿತ್ತು. 

ಇನ್ನೇನು ಹಸ್ತಾಂತರಿಸಬೇಕು ಎನ್ನುವಷ್ಟರಲ್ಲಿ ಅಭಿನಂದನ್ ಪಾಕಿಸ್ತಾನದಲ್ಲಿ ಕಳೆದ ಎರಡು ದಿನಗಳ ಅನುಭವವನ್ನು ಹೇಳಿಕೊಂಡ ವಿಡಿಯೋವೊಂದನ್ನು ಬಿಡುಗಡೆ ಮಾಡಿತು. ಅಲ್ಲದೇ ಅಭಿನಂದನ್ ಹಸ್ತಾಂತರಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ, ವಿವಿಧ ಆರೋಗ್ಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಜೊತೆಗೆ ಹಸ್ತಾಂತರಕ್ಕೂ ಮುನ್ನ ಇದ್ದ ಆರೋಗ್ಯ ಸ್ಥಿತಿಯನ್ನು ದಾಖಲಿಸಿಕೊಳ್ಳಲಾಗಿದೆ. ಹೀಗಾಗಿ ಅಭಿನಂದನ್ ಪ್ರಕ್ರಿಯೆ ಮೂರ್ನಾಲ್ಕು ಗಂಟೆಗಳ ಕಾಲ ವಿಳಂಬಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios