ಸಿಎಂ ಸಿದ್ದರಾಮಯ್ಯ ಉಡುಪಿ ಕೃಷ್ಣಮಠದ ಮೇಲಿನ ಮುನಿಸು ಮುಂದುವರಿಸಿದ್ದಾರೆ. ಸಿಎಂ ಆದ ಬಳಿಕ ಉಡುಪಿಗೆ ನೀಡಿದ ಐದನೇ ಬೇಟಿಯಲ್ಲೂ ಕೃಷ್ಣ ದೇವರ ದರ್ಶನ ಮಾಡಲಿಲ್ಲ, ಪೇಜಾವರ ಸ್ವಾಮೀಜಿಯನ್ನು ಬೇಟಿಯಾಗಲಿಲ್ಲ.

ಬೆಂಗಳೂರು (ನ.19): ಸಿಎಂ ಸಿದ್ದರಾಮಯ್ಯ ಉಡುಪಿ ಕೃಷ್ಣಮಠದ ಮೇಲಿನ ಮುನಿಸು ಮುಂದುವರಿಸಿದ್ದಾರೆ. ಸಿಎಂ ಆದ ಬಳಿಕ ಉಡುಪಿಗೆ ನೀಡಿದ ಐದನೇ ಬೇಟಿಯಲ್ಲೂ ಕೃಷ್ಣ ದೇವರ ದರ್ಶನ ಮಾಡಲಿಲ್ಲ, ಪೇಜಾವರ ಸ್ವಾಮೀಜಿಯನ್ನು ಬೇಟಿಯಾಗಲಿಲ್ಲ.

ಸಿಎಂ ನೇರವಾಗಿ ವಿರೋಧವನ್ನೂ ಮಾಡದೆ, ಕೃಷ್ಣಮಠಕ್ಕೆ ಭೇಟಿಯನ್ನೂ ನೀಡದೆ ಐದನೇ ಬಾರಿ ಉಡುಪಿ ಪ್ರವಾಸ ಮುಗಿಸಿ ಬಂದಿದ್ದಾರೆ. ಇವತ್ತು ಉದ್ಯಮಿ ಬಿ.ಆರ್. ಶೆಟ್ಟಿ ಸಹಭಾಗಿತ್ವದ ಆಸ್ಪತ್ರೆ ಉದ್ಘಾಟನೆಗೆಂದು ಸಿಎಂ ಉಡುಪಿಗೆ ಬಂದಿದ್ದರು. ಅಪ್ಪಿ ತಪ್ಪಿಯೂ ಮಠದತ್ತ ಮುಖ ಮಾಡದೇ ವಾಪಾಸ್ ಆಗಿದ್ದಾರೆ. ಏನ್ ಸರ್ ಕೃಷ್ಣ ಮಠಕ್ಕೆ ಯಾಕೆ ಹೋಗಲ್ಲ ಅಂತಾ ಕೇಳಿದ್ದಕ್ಕೆ ಬಸವಣ್ಣನ ವಚನ ಹೇಳಿದ್ದಾರೆ.

ಉಡುಪಿಯಲ್ಲಿ ಈ ವಾರಾತ್ಯದಿಂದ ಮೂರು ದಿನ ಧರ್ಮಸಂಸತ್ತು ಹಿನ್ನೆಲೆಯಲ್ಲಿ ನಗರದಲ್ಲಿ ಕೈ ಬಾವುಟಕ್ಕಿಂತ ಕೇಸರಿ ಧ್ವಜಗಳೇ ರಾರಾಜಿಸುತ್ತಿದ್ದವು. ಇದು ಸಿಎಂಗೆ ಸ್ವಲ್ಪ ಮುಜುಗರ ಹುಟ್ಟಿಸಿದ್ದಂತೂ ಸತ್ಯ. ಒಟ್ಟಿನಲ್ಲಿ, ಈ ಬಾರಿಯಾದರೂ ಸಿಎಂ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆನೋ ಅನ್ನೋ ನಂಬಿಕೆ ಹುಸಿಯಾಗಿದೆ.