-ಚುನಾವಣಾ ಪ್ರಚಾರದ ಪ್ರವಾಸದಲ್ಲಿರುತ್ತೇನೆಂದ ಸಿದ್ದರಾಮಯ್ಯ- ರಾಹುಲ್ ಪಟ್ಟಾಭಿಷೇಕಕ್ಕೆ ಗೈರು.- ಅತ್ತ ಖರ್ಗೆ ರಾಹುಲ್ ಪಟ್ಟಾಭಿಷೇಕದ ಕಾರ್ಯಕ್ರಮದಲ್ಲಿದ್ದರೆ, ಇತ್ತ ಕಲಬುರ್ಗಿಯಲ್ಲಿ ಮಿಂಚುತ್ತಿದ್ದ 

ಹೊಸದಿಲ್ಲಿ: ಕಾಂಗ್ರೆಸ್‌ನಂಥ ದರ್ಬಾರಿಗಳ ಪಕ್ಷದಲ್ಲಿ ಗಾಂಧಿ ಕುಟುಂಬದ ಕುಡಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗ, 'ನಾನು ಚುನಾವಣಾ ಪ್ರವಾಸ ಮಾಡುತ್ತೇನೆ, ಹೀಗಾಗಿ ಮೊದಲೇ ಅಭಿನಂದಿಸುತ್ತೇನೆ, ನಿಮ್ಮ ಪಟ್ಟಾಭಿಷೇಕದ ಸಮಾರಂಭಕ್ಕೆ ನನಗೆ ಬರಲು ಆಗುವುದಿಲ್ಲ,' ಎಂದು ನೇರವಾಗಿ ರಾಹುಲ್ ಗಾಂಧಿಗೆ ಹೇಳುವ ಧೈರ್ಯ ಸಿದ್ದರಾಮಯ್ಯ ಥರದವರಿಗೆ ಮಾತ್ರ ಇರಲು ಸಾಧ್ಯ.

ಹಿಂದೆ ಇಂದಿರಾ, ರಾಜೀವ್‌ಗಾಂಧಿ ಇದ್ದಾಗ ವೀರೇಂದ್ರ ಪಾಟೀಲ್, ಅಂಜಯ್ಯರಂತಹ ಎಷ್ಟೋ ಮುಖ್ಯಮಂತ್ರಿಗಳು ಸಣ್ಣ ಪುಟ್ಟ ಕಾರಣಕ್ಕೆ ಅಧಿಕಾರ ಕಳೆದುಕೊಂಡಿರುವಾಗ ಸಿದ್ದರಾಮಯ್ಯ ರಾಹುಲ್ ಗಾಂಧಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಬರದೇ ಪ್ರವಾಸಕ್ಕೆ ಹೋಗಿದ್ದು ಮೊದಲಿನಿಂದಲೂ ಕಾಂಗ್ರೆಸ್‌ನಲ್ಲೇ ಇರುವ ನಾಯಕರ ಮಧ್ಯೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ಅದರಲ್ಲೂ ರಾಹುಲ್ ಅಧಿಕಾರ ಸ್ವೀಕಾರ ಇರುವಾಗ ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರ್ಗಿ ಕ್ಷೇತ್ರಕ್ಕೆ ಹೋಗಿ ಸಿದ್ದರಾಮಯ್ಯ ಮಿಂಚುತ್ತಿದ್ದರೆ, ಖರ್ಗೆ ಸಾಹೇಬರು ಸಿಟ್ಟನ್ನು ತೋರಿಸಲೂ ಆಗದೆ, ಮಾತನಾಡಲೂ ಆಗದೆ ದೆಹಲಿಯಲ್ಲಿಯೇ ಇದ್ದರು. 

(ಕನ್ನಡ ಪ್ರಭದಲ್ಲಿ ಪ್ರಕಟವಾದ ಪ್ರಕಾಶ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)