ರಿಪಬ್ಲಿಕ್​ ಟಿವಿ​ - ಸಿವೋಟರ್ ಸರ್ವೆ ಪ್ರಕಾರ ಈಗ ಲೋಕಸಭೆ ಚುನಾವಣೆ ನಡೆದರೆ ಎನ್​​ಡಿಎ ಗೆಲ್ಲುವ ಸಾಧ್ಯತೆ ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ, ಎನ್​ಡಿಎ 22, ಯುಪಿಎ 5, ಹಾಗೂ ಇತರರು 1 ಸ್ಥಾನಗಳಲ್ಲಿ ಗೆಲುವು

ಬೆಂಗಳೂರು: ಆಂಗ್ಲ ಸುದ್ದಿವಾಹಿನಿ ರಿಪಬ್ಲಿಕ್​ ಟಿವಿ​ - ಸಿವೋಟರ್ ಸರ್ವೆ ಪ್ರಕಾರ ಈಗ ಲೋಕಸಭೆ ಚುನಾವಣೆ ನಡೆದರೆ ಎನ್​​ಡಿಎ ಗೆಲ್ಲುವ ಸಾಧ್ಯತೆಯಿದೆ.

ಈಗ ಚುನಾವಣೆ ನಡೆದರೆ 543 ಲೋಕಸಭಾ ಸ್ಥಾನಗಳ ಪೈಕಿ ಎನ್’ಡಿಎ ಮೈತ್ರಿಕೂಟವು 335 ಸ್ಥಾನಗಳನ್ನು, ಹಾಗೂ ಯುಪಿಎ 89 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಯು ಹೇಳಿದೆ.

ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲೂ ಪ್ರಧಾನಿ ಮೋದಿ ಅಲೆ ಕೆಲಸ ಮಾಡಲಿದೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ, ಎನ್​ಡಿಎ 22, ಯುಪಿಎ 5, ಹಾಗೂ ಇತರರು 1 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಾರೆ.

ಒಂದು ವೇಳೆ ಜೆಡಿಎಸ್​​​​ ಜತೆ ಕೈಜೋಡಿಸಿದರೆ ಕಾಂಗ್ರೆಸ್​ ಮುನ್ನಡೆ ಸಾಧಿಸುವುದು ಎಂದು ಹೇಳಲಾಗಿದೆ.

ಜೆಡಿಎಸ್​​​​-ಕಾಂಗ್ರೆಸ್ ಮೈತ್ರಿಯಿಂದ ಯುಪಿಎಗೆ 17 ಹಾಗೂ ಬಿಜೆಪಿಗೆ 11​ ಸ್ಥಾನಗಳು ದಕ್ಕಲಿವೆ.

ರಿಪಬ್ಲಿಕ್​​ - ಸಿವೋಟರ್ ಸರ್ವೆ ಇತರ ಮುಖ್ಯಾಂಶಗಳು:

  • ದೆಹಲಿ - 7 ಲೋಕಸಭಾ ಕ್ಷೇತ್ರಗಳೂ ಎನ್​​ಡಿಎ ಗೆಲ್ಲುವ ಸಾಧ್ಯತೆ
  • ಛತ್ತೀಸ್​ಗಢ(11) - ಎನ್​​ಡಿಎ 4, ಯುಪಿಎ 7, ಇತರೆ - 0
  • ಗೋವಾ - 2 ಲೋಕಸಭಾ ಕ್ಷೇತ್ರಗಳಲ್ಲೂ ಎನ್​​​​​​​​ಡಿಎ ಗೆಲುವು ಸಾಧ್ಯತೆ
  • ಗುಜರಾತ್(26)​ - ಎನ್​​ಡಿಎ 23, ಯುಪಿಎ 3, ಇತರೆ 0
  • ಹರಿಯಾಣ(10) - ಎನ್​​ಡಿಎ 8, ಯುಪಿಎ 1, ಇತರೆ 1ರಲ್ಲಿ ಗೆಲುವು
  • ಹಿಮಾಚಲಪ್ರದೇಶ(4) - ಎನ್​​ಡಿಎ 4, ಯುಪಿಎ 0, ಇತರೆ 0
  • ಜಮ್ಮು-ಕಾಶ್ಮೀರ(6) - ಎನ್​ಡಿಎ 4, ಯುಪಿಎ 2 ಸ್ಥಾನಗಳಲ್ಲಿ ಗೆಲುವು
  • ಜಾರ್ಖಂಡ್(14)​ - ಎನ್​ಡಿಎ 7, ಯುಪಿಎ 6, ಇತರೆ 1
  • ಕೇರಳ(20) - ಎನ್​​ಡಿಎ 1, ಯುಪಿಎ 12, ಇತರೆ 7 ಸ್ಥಾನ
  • ಲಕ್ಷದ್ವೀಪ - ಒಂದು ಲೋಕಸಭಾ ಕ್ಷೇತ್ರವೂ ಯುಪಿಎ ಪಾಲು
  • ಮಧ್ಯಪ್ರದೇಶ(29) - ಎನ್​​ಡಿಎ 23, ಯುಪಿಎ 6, ಇತರೆ 0
  • ಮಹಾರಾಷ್ಟ್ರ(48) - ಎನ್​​ಡಿಎ 44, ಯುಪಿಎ 2, ಇತರೆ 2
  • ಮಣಿಪುರ(2)- ಎನ್​​ಡಿಎ 2, ಯುಪಿಎ 0, ಇತರೆ 0
  • ಮೇಘಾಲಯ - ಎನ್​​ಡಿಎ 2, ಯುಪಿಎ 0, ಇತರೆ 0
  • ಮಿಜೋರಾಮ್​​​​ - ಎನ್​​ಡಿಎ 1, ಯುಪಿಎ 0, ಇತರೆ 0
  • ನಾಗಾಲ್ಯಾಂಡ್​​​​​​​​ - ಎನ್​​ಡಿಎ 1, ಯುಪಿಎ 0, ಇತರೆ 0
  • ಒಡಿಶಾ​​​​​​​​(21) - ಎನ್​​ಡಿಎ 13, ಯುಪಿಎ 0, ಇತರೆ 8
  • ಪುದುಚೇರಿ - ಎನ್​​ಡಿಎ 0, ಯುಪಿಎ 1, ಇತರೆ 0

ಪಂಜಾಬ್​​(13) - ಎನ್​​ಡಿಎ 2, ಯುಪಿಎ 9, ಇತರೆ 2