ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರ ಗೃಹ ಸಚಿವ ಹೊಣೆಗಾರಿಕೆ ಬುಧವಾರ ಮುಕ್ತಾಯಗೊಳ್ಳ ಲಿದ್ದು, ಈಗಾಗಲೇ ಅವರು ಈ ಹುದ್ದೆಗೆ ನೀಡಿರುವ ರಾಜೀ ನಾಮೆ ಪತ್ರ ಒಂದೆರಡು ದಿನಗ ಳಲ್ಲಿ ರಾಜ್ಯಪಾಲರಿಗೆ ರವಾನೆ ಯಾಗಲಿದೆ. ಇದರ ಬೆನ್ನಲ್ಲೇ ಮುಂದಿನ ಗೃಹ ಸಚಿವ ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ತಾವೇ ನಿಭಾಯಿಸಲಿದ್ದಾ ರೆಯೇ ಅಥವಾ ಬೇರೆ ಯಾರಿಗಾದರೂ ನೀಡಲಿದ್ದಾರೆಯೇ? ನೀಡಲಿ ದ್ದರೆ, ಯಾವಾಗ ಎಂಬ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ ಪರಮೇಶ್ವರ್‌ ಅವರೇ ಈ ಹೊಣೆ ಗಾರಿಕೆಯನ್ನು ಇನ್ನೂ ಕೆಲ ತಿಂಗಳು ನಿರ್ವಹಿಸಲಿ ಎಂಬ ಉದ್ದೇಶ ಸಿಎಂ ಸಿದ್ದರಾಮಯ್ಯ ಅವರಿಗೆ ಇತ್ತು.
ಬೆಂಗಳೂರು(ಜೂ.21): ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಗೃಹ ಸಚಿವ ಹೊಣೆಗಾರಿಕೆ ಬುಧವಾರ ಮುಕ್ತಾಯಗೊಳ್ಳ ಲಿದ್ದು, ಈಗಾಗಲೇ ಅವರು ಈ ಹುದ್ದೆಗೆ ನೀಡಿರುವ ರಾಜೀ ನಾಮೆ ಪತ್ರ ಒಂದೆರಡು ದಿನಗ ಳಲ್ಲಿ ರಾಜ್ಯಪಾಲರಿಗೆ ರವಾನೆ ಯಾಗಲಿದೆ. ಇದರ ಬೆನ್ನಲ್ಲೇ ಮುಂದಿನ ಗೃಹ ಸಚಿವ ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ತಾವೇ ನಿಭಾಯಿಸಲಿದ್ದಾ ರೆಯೇ ಅಥವಾ ಬೇರೆ ಯಾರಿಗಾದರೂ ನೀಡಲಿದ್ದಾರೆಯೇ? ನೀಡಲಿ ದ್ದರೆ, ಯಾವಾಗ ಎಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ ಪರಮೇಶ್ವರ್ ಅವರೇ ಈ ಹೊಣೆ ಗಾರಿಕೆಯನ್ನು ಇನ್ನೂ ಕೆಲ ತಿಂಗಳು ನಿರ್ವಹಿಸಲಿ ಎಂಬ ಉದ್ದೇಶ ಸಿಎಂ ಸಿದ್ದರಾಮಯ್ಯ ಅವರಿಗೆ ಇತ್ತು.
ಈ ಬಗ್ಗೆ ಸಿಎಂ ಅವರು ಒಂದೆರಡು ಬಾರಿ ಪರಮೇಶ್ವರ್ ಅವರಿಗೆ ಸೂಚನೆಯನ್ನೂ ನೀಡಿದ್ದರು. ಸಿಎಂ ಅವರ ಈ ನಿಲುವಿಗೆ ಸಂಪುಟದ ಬಹುತೇಕ ಹಿರಿಯ ಸಚಿವರು ತಾವು ಹಾಲಿ ನಿರ್ವಹಿಸುತ್ತಿರುವ ಖಾತೆಯನ್ನು ತ್ಯಜಿಸಿ ಗೃಹ ಖಾತೆಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲದಿರುವುದು ಕಾರಣ ಎನ್ನಲಾಗುತ್ತಿದೆ.
ಸದ್ಯಕ್ಕೆ ಸಿಎಂ ಬಳಿಯೇ ಗೃಹ ಖಾತೆ:
ಪರಮೇಶ್ವರ್ ಶೀಘ್ರ ಖಾತೆಯಿಂದ ವಿಮುಕ್ತಿ ಪಡೆಯಲು ಬಯಸಿರುವುದು ಹಾಗೂ ಹಿರಿಯ ಸಚಿವರು ಈ ಖಾತೆಯನ್ನು ವಹಿಸಿಕೊಳ್ಳಲು ಸಜ್ಜಾಗದೇ ಇರುವುದರಿಂದ ಸಚಿವ ಸಂಪುಟ ವಿಸ್ತರಣೆವರೆಗೂ ಗೃಹ ಖಾತೆಯನ್ನು ತಾತ್ಕಾಲಿಕವಾಗಿ ತಾವೇ ನಿರ್ವಹಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳುತ್ತವೆ. ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ನಿರ್ವಹಿಸುವಂತೆ ತಮ್ಮ ಆಪ್ತ ಸಚಿವ ಮಹದೇವಪ್ಪ ಅವರಿಗೆ ಸೂಚಿಸಿದ್ದರು. ಆದರೆ, ಲೋಕೋ ಪಯೋಗಿ ಖಾತೆಯಂತಹ ಮಹತ್ವದ ಖಾತೆ ಹೊಣೆ ಹೊತ್ತಿರುವ ಮಹದೇವಪ್ಪ ಗೃಹ ಖಾತೆಯ ಭಾರವನ್ನು ಹೊರಲು ತಯಾರಿಲ್ಲ. ಇನ್ನು ಕೆ.ಜೆ. ಜಾಜ್ರ್ ಅವರಂತೂ ಸುತರಾಂ ಈ ಹೊಣೆಗಾರಿಕೆಗೆ ತಯಾರಿಲ್ಲ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಹೈಕಮಾಂಡ್ ಈ ಹೊಣೆಯನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನೀಡಬಹುದೇ ಪರಿಶೀಲಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ. ಆದರೆ, ಶಿವಕುಮಾರ್ಗೆ ಈ ಖಾತೆಯನ್ನು ನೀಡಲು ಸಿಎಂ ಸಿದ್ದರಾಮಯ್ಯ ಸುತರಾಂ ತಯಾರಿಲ್ಲ. ಹೀಗಾಗಿ ಹಿರಿಯ ಸಚಿವರಾದ ದೇಶಪಾಂಡೆ ಹಾಗೂ ಎಚ್.ಕೆ.ಪಾಟೀಲ್ ಅವರಂತಹ ಹೆಸರುಗಳು ಚಾಲ್ತಿಗೆ ಬಂದಿದೆ. ಆದರೆ, ಈ ಯಾವ ಸಚಿವರೂ ತಾವು ಹಾಲಿ ನಿರ್ವಹಿಸುತ್ತಿರುವ ಖಾತೆಯ ಬದಲಿಗೆ ಗೃಹ ಖಾತೆ ಹೊಣೆ ಹೊರಲು ತಯಾರಿಲ್ಲ. ಬದಲಾಗಿ, ಹೆಚ್ಚುವರಿಯಾಗಿ ಗೃಹ ಖಾತೆ ದೊರಕಿದರೆ ನಿರ್ವಹಿಸಲು ಸಿದ್ಧರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಹತ್ವದ ಗೃಹ ಖಾತೆಯನ್ನು ಹೆಚ್ಚುವರಿ ಯಾಗಿ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನಸಿಲ್ಲ.
