ಪಂಚ ರಾಜ್ಯ ಚುನಾವಣೆಯಲ್ಲಿ ಮೋದಿ ಮೋಡಿ ಮಾಡಿದ್ದಾರೆ. ಉತ್ತರದಲ್ಲಿ ಮೋದಿ ಹವಾ ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷಗಳನ್ನ ಧೂಳಿಪಟ ಮಾಡಿದ್ದು, ಬಿಜೆಪಿ ಬಹುಮತ ಗಳಿಸಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾರಾಗ್ತಾರೆ? ಯಾರಿಗೆ ಒಲಿಯಲಿದೆ ಉತ್ತರದ ಗದ್ದುಗೆ? ಈ ಕುರಿತ ಸಂಪಪೂರ್ಣ ವರದಿ ಇಲ್ಲಿದೆ.
ಉತ್ತರ ಪ್ರದೇಶ(ಮಾ.12): ಪಂಚ ರಾಜ್ಯ ಚುನಾವಣೆಯಲ್ಲಿ ಮೋದಿ ಮೋಡಿ ಮಾಡಿದ್ದಾರೆ. ಉತ್ತರದಲ್ಲಿ ಮೋದಿ ಹವಾ ಕಾಂಗ್ರೆಸ್ ಮತ್ತು ಎಸ್ಪಿ ಪಕ್ಷಗಳನ್ನ ಧೂಳಿಪಟ ಮಾಡಿದ್ದು, ಬಿಜೆಪಿ ಬಹುಮತ ಗಳಿಸಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾರಾಗ್ತಾರೆ? ಯಾರಿಗೆ ಒಲಿಯಲಿದೆ ಉತ್ತರದ ಗದ್ದುಗೆ? ಈ ಕುರಿತ ಸಂಪಪೂರ್ಣ ವರದಿ ಇಲ್ಲಿದೆ.
ರಾಮ ಜನ್ಮ ಭೂಮಿಯಲ್ಲಿ 26 ವರ್ಷಗಳ ಬಳಿಕ ಸ್ವಂತ ಬಲದಲ್ಲಿ ಕಮಲ ಪಡೆ ಅಧಿಪತ್ಯ ಸ್ಥಾಪಿಸಿದೆ. ನೋಟ್ ಬ್ಯಾನ್ ಸಂಕಷ್ಟ, ಬೆಲೆ ಏರಿಕೆ ನಾನಾ ಕಾರಣಗಳನ್ನ ಮುಂದಿಟ್ಟುಕೊಂಡು ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಸಮರ ಸಾರಿದವರಿಗೆಲ್ಲ ಮತದಾರ ಸ್ಪಷ್ಟ ಉತ್ತರ ನೀಡಿದ್ದಾನೆ. ಈಗ ಎದುರಾಗಿದ್ದು ಯಾರಾಗ್ತಾರೆ ಸಿಎಂ ಎನ್ನುವುದು. ಉತ್ತರ ಪ್ರದೇಶದ ಸಿಎಂ ಗದ್ದುಗೆ ರೇಸ್'ನಲ್ಲಿ ಸಾಕಷ್ಟು ಜನರ ಹೆಸರು ಕೇಳಿ ಬರುತ್ತಿದೆ. ಘಟಾನುಘಟಿಗಳೇ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.
ಯಾರಾಗ್ತಾರೆ ಯುಪಿ ಸಿಎಂ ?
ಮುಖ್ಯಮಂತ್ರಿ ಸೇನ್ನಲ್ಲಿ ಬಲವಾಗಿ ಕೇಳಿ ಬರ್ತಿರೋದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೆಸರು. ಈಗಾಗಲೇ ಉತ್ತರ ಪ್ರದೇಶದಲ್ಲಿ ಒಂದು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ ಅನುಭವ ಇದೆ. ವಾಜಪೇಯಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಲ್ಲದೇ ಎರಡು ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು. ಅಷ್ಟೇ ಅಲ್ಲ ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಕೂಡ ಹೌದು. ಮೋದಿಗೆ ರಾಜತಾಂತ್ರಿಕ ವಿಚಾರದಲ್ಲಿ ಆಪ್ತ ಸಲಹೆಗಾರ ಅನ್ನೋದು ಮತ್ತೊಂದು ಪ್ಲಸ್ ಪಾಯಿಂಟ್.
ಬಳಿಕ ಕೇಳಿ ಬರ್ತಿರೋದು ಉತ್ತರ ಪ್ರದೇಶ ಬಿಜೆಪಿ ಹಾಲಿ ಅಧ್ಯಕ್ಷ ಕೇಶವ ಪ್ರಸಾದ ಮೌರ್ಯ ಅವರ ಹೆಸರು. ಈ ಬಾರಿ ಚುನಾವಣೆಯ ನೈಜ್ಯ ಸಾರಥ್ಯ ವಹಿಸಿದ್ದ ಇವರು ಬಿಜೆಪಿ ಗೆಲುವಿಗೆ ಹೆಗಲು ಕೊಟ್ಟು ದುಡಿದವರು. ಲೋಕಸಭಾ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಪ್ರಧಾನಿ ಮೋದಿ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.
ಕೇಂದ್ರ ಸಚಿವೆ ಉಮಾಭಾರತಿ ಕೂಡ ಸಿಎಂ ರೇಸ್ನಲ್ಲಿದ್ದಾರೆ. ಒಂದು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದು, ವಾಜಪೇಯಿ ಸರ್ಕಾರದಲ್ಲೂ ಸಚಿವೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಎಲ್ ಕೆ ಅಡ್ವಾಣಿಯ ಹೋರಾಟಗಳಿಗೆ ಸಾಥ್ ನೀಡಿದ್ದವರು.
ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿರೋ ಮತ್ತೊಬ್ಬ ಅಭ್ಯರ್ಥಿ ಸಂಸದ ಯೋಗಿ ಆದಿತ್ಯಾನಂದ. ಅತೀ ಚಿಕ್ಕವಯಸ್ಸಿನಲ್ಲೇ ಸಂಸದರಾಗಿದ್ದಾರೆ. ಬಲಿಷ್ಠ ರಜಪೂತ ಕುಟುಂಬದ ಹಿನ್ನೆಲೆಯಿಂದ ಬಂದವರು ಅನ್ನೋದು ಗಮನಾರ್ಹ.
ಇವರಷ್ಟೇ ಅಲ್ಲ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರು ಕೂಡ ಕೇಳಿ ಬರುತ್ತಿದೆ. ಇವರಲ್ಲಿ ಅಂತಿಮವಾಗಿ ಸಿಎಂ ಪಟ್ಟಕ್ಕೆ ಏರುವವರ್ಯಾರು ಅನ್ನೋದನ್ನ ಕಾದು ನೊಡಬೇಕಿದೆ.
