ಇಸ್ಲಾಮಾಬಾದ್(ನ.21): ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜ.ರಹೀಲ್ ಷರೀಫ್ 29ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದಾರೆ. ಅದಕ್ಕೆ ಪೂರಕವಾಗಿ ಜ.ಷರೀಫ್ ಸೇನೆಯ ವಿವಿಧ ಘಟಕಗಳಿಗೆ ವಿದಾಯ ಭೇಟಿಯನ್ನಾರಂಭಿಸಿದ್ದಾರೆ. ಮೊದಲ ಹಂತವಾಗಿ ಅವರು ಲಾಹೋರ್‌ನಲ್ಲಿರುವ ಘಟಕಕ್ಕೆ ಭೇಟಿ ನೀಡಿದ್ದರು. ನ.28ರ ಮೊದಲು ಸೇನೆಗೆ ಹೊಸ ಮುಖ್ಯಸ್ಥರ ಆಯ್ಕೆ ಮಾಡಬೇಕಾಗಿದೆ. ಅದಕ್ಕಾಗಿ ಪ್ರಧಾನಿ ನವಾಜ್ ಷರೀಫ್  ನೇತೃತ್ವದ ಸಮಿತಿ ಶೋಧ ನಡೆಸಲಾರಂಭಿಸಿದೆ. ಹಿರಿಯ ಅಕಾರಿಗಳಾಗಿರುವ ಲೆ.ಜ.ಜಾವೇದ್ ಇಕ್ಬಾಲ್ ರಮಡಿ, ಲೆ.ಜ.ಜುಬೈರ್ ಹಯಾತ್, ಲೆ.ಜ.ಇಷಾಕ್ ನದೀಮ್ ಅಹ್ಮದ್, ಲೆ.ಜ. ಖಮರ್ ಜಾವೇದ್ ಬಾಜ್ವಾ ಸೇನಾ ಮುಖ್ಯಸ್ಥರ ಹುದ್ದೆಗೆ ಪೈಪೋಟಿ ನಡೆಸುತ್ತಿದ್ದಾರೆ. ಅವೆರಲ್ಲರೂ ಪಿಎಂ ಷರೀಫ್ ಆಪ್ತರಾಗಿದ್ದಾರೆ.