ಶಶಿಕಲಾ ಜೈಲು ಪಾಲಾಗುತ್ತಿದ್ದಂತೆ ಗವರ್ನರ್ ವಿದ್ಯಾಸಾಗರ್ ಪಳನಿಸ್ವಾಮಿಯನ್ನು ಸಂಪರ್ಕಿಸಿ ಬೆಂಬಲಿಗರ ಸಹಿ ಸಂಗ್ರಹದ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ.
ಚೆನ್ನೈ (ಫೆ.16): ಶಶಿಕಲಾ ಜೈಲು ಸೇರುತ್ತಿದ್ದಂತೆ, ಅತ್ತ ತಮಿಳುನಾಡು ರಾಜಕೀಯ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಹೊಸ ಸರ್ಕಾರ ರಚನೆಗೆ ಅವಕಾಶ ನೀಡಲು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಗವರ್ನರ್ ಸೂಚಿಸಲಿದ್ದಾರೆ.
ಶಶಿಕಲಾ ಘೋಷಿಸಿ ಹೋಗಿರುವ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಪಳನಿಸ್ವಾಮಿಗೆ ಮೊದಲು ಅವಕಾಶ ನೀಡುವ ಸಾಧ್ಯತೆ ಇದೆ.
ಶಶಿಕಲಾ ಜೈಲು ಪಾಲಾಗುತ್ತಿದ್ದಂತೆ ಗವರ್ನರ್ ವಿದ್ಯಾಸಾಗರ್ ಪಳನಿಸ್ವಾಮಿಯನ್ನು ಸಂಪರ್ಕಿಸಿ ಬೆಂಬಲಿಗರ ಸಹಿ ಸಂಗ್ರಹದ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ.
ಅದರಂತೆ ನಿನ್ನೆ ಪಳನಿಸ್ವಾಮಿ ಬೆಂಬಲಿತ 124 ಶಾಸಕರ ಸಹಿ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪನ್ನೀರ್ ಸೆಲ್ವಂ ಕೂಡ ಗವರ್ನರ್ ಭೇಟಿಯಾಗಿ ತಮಗೆ ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ.