ಮಗನಿಗಾಗಿ ವರುಣಾ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಭಲ ಎದುರಾಳಿಯಾಗಿ ಜೆಡಿಎಸ್ ಅಭ್ಯರ್ಥಿ ಸಿದ್ದಗೊಂಡಿದ್ದಾರೆ.

ಮೈಸೂರು : ಮಗನಿಗಾಗಿ ವರುಣಾ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಭಲ ಎದುರಾಳಿಯಾಗಿ ಜೆಡಿಎಸ್ ಅಭ್ಯರ್ಥಿ ಸಿದ್ದಗೊಂಡಿದ್ದಾರೆ.

ಜೆಡಿಎಸ್‌ನ ಹಾಲಿ ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರೇ ಪ್ರಬಲ ಎದುರಾಳಿ ಎನ್ನಲಾಗುತ್ತಿದೆ.

 ಬಿಜೆಪಿಯಿಂದ ಅಪ್ಪಣ್ಣ, ಹೇಮಂತಕುಮಾರ್‌ಗೌಡ ಮತ್ತಿತರ ಹೆಸರಿದ್ದರೂ ಕಡೆಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿ ಹಾಕುವುದಾಗಿ ಪಕ್ಷ ಹೇಳುತ್ತಿದೆ. ಇಲ್ಲೇನಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ಹಣಾಹಣಿ.