ಮುಂದಿನ ಸಿಎಂ ಯಾರು?: ಟಿಡಿಪಿ ಅಭಿಮಾನಿ ಪೇಜಲ್ಲಿ ವೈಎಸ್‌ಆರ್‌ ಜಗನ್‌ಗೆ ಜಯ!

Who Is The Next SM
Highlights

ಇತ್ತೀಚೆಗೆ ಕಾಂಗ್ರೆಸ್‌ ನಡೆಸಿದ ಆನ್‌ಲೈನ್‌ ಸಮೀಕ್ಷೆಯೊಂದರಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಪರ ಹೆಚ್ಚಿನ ಮತ ಬಿದ್ದು, ಕಾಂಗ್ರೆಸ್‌ ಮುಖಭಂಗ ಅನುಭವಿಸಿತ್ತು.

ಹೈದರಾಬಾದ್‌: ಇತ್ತೀಚೆಗೆ ಕಾಂಗ್ರೆಸ್‌ ನಡೆಸಿದ ಆನ್‌ಲೈನ್‌ ಸಮೀಕ್ಷೆಯೊಂದರಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಪರ ಹೆಚ್ಚಿನ ಮತ ಬಿದ್ದು, ಕಾಂಗ್ರೆಸ್‌ ಮುಖಭಂಗ ಅನುಭವಿಸಿತ್ತು.

ಇದೇ ರೀತಿ ಪ್ರಕರಣ ಇದೀಗ ಆಂಧ್ರದಲ್ಲಿ ನಡೆದಿದೆ. ಆಂಧ್ರದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಸ್ವಘೋಷಿತ ತೆಲುಗು ದೇಶಂ ಪಕ್ಷ (ಟಿಡಿಪಿ) ಫ್ಯಾನ್‌ ಫೇಸ್‌ಬುಕ್‌ ಪೇಜ್‌ ನಡೆಸಿದ್ದ ಆನ್‌ಲೈನ್‌ ಚುನಾವಣೆಯಲ್ಲಿ, ವೈಎಸ್‌ಆರ್‌ ಕಾಂಗ್ರೆಸ್‌ನ ಮುಖ್ಯಸ್ಥ ಜಗನ್ಮೋಹನ್‌ ರೆಡ್ಡಿ ಪರ ಶೇ.51ರಷ್ಟು, ಟಿಡಿಪಿಯ ಚಂದ್ರಬಾಬು ನಾಯ್ಡು ಪರ ಶೇ.49ರಷ್ಟುಜನ ಮತ ಚಲಾಯಿಸಿದ್ದಾರೆ.

ಇದರಿಂದ ತೀವ್ರ ಮುಖಭಂಗಕ್ಕೆ ಒಳಗಾದ ಅಭಿಮಾನಿ ಬಳಗ ಸಮೀಕ್ಷೆಯನ್ನೇ ಅಳಿಸಿಹಾಕಿದೆ.

loader