ಬಿಜೆಪಿಯಿಂದ ಯಾರಿಗೆ ಸಿಗಲಿದೆ ಟಿಕೆಟ್..?

Who Is The BJP Candidate From Anekal
Highlights

ಮೀಸಲು ಕ್ಷೇತ್ರವಿದು. ಹಾಲಿ ಶಾಸಕ ಬಿ. ಶಿವಣ್ಣ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸುವ ಸಂಭವ ಹೆಚ್ಚಾಗಿದೆ.

ಆನೇಕಲ್ : ಮೀಸಲು ಕ್ಷೇತ್ರವಿದು. ಹಾಲಿ ಶಾಸಕ ಬಿ. ಶಿವಣ್ಣ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸುವ ಸಂಭವ ಹೆಚ್ಚಾಗಿದೆ.

ಈ ಬಾರಿ ಬಿಜೆಪಿಯಿಂದ ಹಲವರು ಪ್ರಯತ್ನ ನಡೆಸುತ್ತಿದ್ದಾರೆ. ಈ ಪೈಕಿ ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ನಟ ಶಿವರಾಂ ಅವರೂ ಇದ್ದಾರೆ.

ಆದರೆ, ನಾರಾಯಣಸ್ವಾಮಿ ಅವರನ್ನು ಬಿಟ್ಟು ಬೇರೊಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಈ ಕ್ಷೇತ್ರವನ್ನು ಮೈತ್ರಿಯ ಫಲವಾಗಿ ಬಿಎಸ್‌ಪಿಗೆ ಜೆಡಿಎಸ್ ಬಿಟ್ಟುಕೊಟ್ಟಿದೆ. ಇಲ್ಲಿ ಬಿಎಸ್‌ಪಿಗೆ ತಕ್ಕಮಟ್ಟಿಗೆ ನೆಲೆಯೂ ಇದೆ.

loader