ವಿಧಾನಸಭಾ ಚುನಾವಣೆ : ಜಾತಿ ಲೆಕ್ಕಾಚಾರದಲ್ಲಿ ಯಾವ ಅಭ್ಯರ್ಥಿ ಸ್ಟ್ರಾಂಗ್..?

First Published 15, Mar 2018, 1:05 PM IST
Who is Strong Contestant In Vijayapura
Highlights

ಎಂ.ಬಿ. ಪಾಟೀಲ್ ಹಾಗೂ ವಿಜುಗೌಡ ಪಾಟೀಲ್ ಅವರು ಲಿಂಗಾಯತರೇ ಆಗಿದ್ದರೂ, ಉಪಜಾತಿ ಲೆಕ್ಕಾಚಾರದಲ್ಲಿ ವಿಜುಗೌಡ ಪ್ರಬಲರಾಗಿದ್ದಾರೆ.

ವಿಜಯಪುರ : ಒಟ್ಟು 2,07,658 ಮತದಾರರಿದ್ದಾರೆ. ಲಿಂಗಾಯಿತ ಮತದಾರರ ಸಂಖ್ಯೆ 86,000. ಆ ಪೈಕಿ ಲಿಂಗಾಯತ ಪಂಚಮಸಾಲಿಗಳು 40,000, ಲಿಂಗಾಯತ ಗಾಣಿಗರು 15,000, ಲಿಂಗಾಯತ ರಡ್ಡಿ- 10,000, ಲಿಂಗಾಯಿತ ಆದಿ ಬಣಜಿಗ- 12,೦೦೦, ಲಿಂಗಾಯಿತ ಕೂಡು ಒಕ್ಕಲಿಗ- 4000, ಇತರ ಲಿಂಗಾಯಿತರು- 5,000 ದಷ್ಟಿದ್ದಾರೆ.

ಕುರುಬರು- 15,000, ಹಿಂದುಳಿದವರು- 38,000, ದಲಿತರು- 50,000 (ದಲಿತರು,ಲಂಬಾಣಿ, ಮಾದಿಗ ಮತ್ತು ಇತರೆ) ಹಾಗೂ ಮುಸ್ಲಿಮರು 18,000ದಷ್ಟಿದ್ದಾರೆ. ಎಂ.ಬಿ. ಪಾಟೀಲ್ ಹಾಗೂ ವಿಜುಗೌಡ ಪಾಟೀಲ್ ಅವರು ಲಿಂಗಾಯತರೇ ಆಗಿದ್ದರೂ, ಉಪಜಾತಿ ಲೆಕ್ಕಾಚಾರದಲ್ಲಿ ವಿಜುಗೌಡ ಪ್ರಬಲರಾಗಿದ್ದಾರೆ.

ಏಕೆಂದರೆ ಕ್ಷೇತ್ರದಲ್ಲಿ 40 ಸಾವಿರದಷ್ಟಿರುವ ಲಿಂಗಾಯತ ಪಂಚಮಸಾಲಿ ಪಂಗಡಕ್ಕೆ ಸೇರಿದವರು ಅವರಾಗಿದ್ದಾರೆ. ಎಂ.ಬಿ. ಪಾಟೀಲರು ಕೂಡು ಒಕ್ಕಲಿಗರಾಗಿದ್ದು, ಅವರ ಜಾತಿಯವರು ಕೇವಲ 4 ಸಾವಿರದಷ್ಟಿದ್ದಾರೆ.

loader