ವನ್ಯಜೀವಿ ಛಾಯಾಗ್ರಹಕರಿಗೆ ಕೂಡ ಆಶ್ಚರ್ಯವಾಗಿದೆ

ಮೈಸೂರು(ನ.15): ಮೈಸುರಿನಲ್ಲಿ ವಿಚಿತ್ರವೊಂದು ನಡೆದಿದ್ದು ಬಿಳಿ ಬಣ್ಣ ಹೊಂದಿರುವ ಕಾಗೆ ಪ್ರತ್ಯಕ್ಷವಾಗಿದೆ. ನಗರದ ಕೆ.ಆರ್‌.ಆಸ್ಪತ್ರೆ ಆವರಣದಲ್ಲಿ ಒಂದೂವರೆ ತಿಂಗಳಿಂದ ಬೀಡು ಬಿಟ್ಟಿರುವ ಈ ಕಾಗೆ ಸಾರ್ವಜನಿಕರನ್ನು ಬೆರಗಾಗುವಂತೆ ಮಾಡಿದೆ. ಬಿಳಿ ಕಾಗೆ ನೋಡಿ ವನ್ಯಜೀವಿ ಛಾಯಾಗ್ರಹಕರಿಗೆ ಕೂಡ ಆಶ್ಚರ್ಯವಾಗಿದೆ. ಜೀನ್ ವ್ಯತ್ಯಾಸಗಳಿಂದ ಕಾಗೆ ಪುಕ್ಕಗಳ ಬಣ್ಣ ಬಿಳಿಬಣ್ಣಕ್ಕೆ ತಿರುಗಿರುವ ಸಾಧ್ಯತೆಯಿದೆ.