ಮಂಡ್ಯ(ಸೆ.14)ಕಾವೇರಿ ನೀರಿಗಾಗಿ ರಾಜ್ಯವೆ ಹೊತ್ತು ಉರಿಯುತ್ತಿದ್ದರು ಶಾಸಕ ಅಂಬರೀಷ್ ಮಾತ್ರ ಇನ್ನೂ ಪತ್ತೆಯಾಗಿಲ್ಲ. ರೈತರ ಜೊತೆ ಹೋರಾಟದಲ್ಲಿ ಭಾಗಿಯಾಗಿಲ್ಲ ಹೀಗಾಗಿ ಅಂಬಿ ವಿರುದ್ಧ ಮಂಡ್ಯದಲ್ಲಿ ಅಸಮಾಧಾನ ಹೆಚ್ಚಾಗಿದೆ.
ಕಾವೇರಿ ನೀರು ಹಂಚಿಕೆ ಕುರಿತು ಶಾಸಕರ ಭವನದಲ್ಲಿ ನಡೆದ ಮಂಡ್ಯ ಭಾಗದ ರೈತರ ಸಭೆಗೂ ಹಾಜರಾಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಹಾಗೂ ರೈತ ಮುಖಂಡರು ಆಗಿರುವ ಪುಟ್ಟಣ್ಣಯ್ಯ, ಅಂಬರೀಷ್ ನಮಗಂತೂ ಸಿಕ್ಕಿಲ್ಲ. ನಿಮಗೆ ಸಿಕ್ಕರೆ ಹೇಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಂಬರೀಷ್ ಮೇಲೆ ಮಂಡ್ಯ ಜನತೆ ಸಾಕಷ್ಟು ಪ್ರೀತಿ ಇಟ್ಟಿದ್ರು. ಕಾವೇರಿ ಹೋರಾಟದಲ್ಲಿ ಅಂಬರೀಷ್ ಭಾಗಿಯಾಗಬೇಕಿತ್ತು. ಈ ಸಮಯದಲ್ಲಿ ಅವರು ಜನರ ಮಧ್ಯೆ ಇರಬೇಕಿತ್ತು ಎಂದು ಪುಟ್ಟಣ್ಣಯ್ಯ ಅಂಬರೀಷ್ ಗೈರು ಹಾಜರಾತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
