ಅಹ್ಮದಾಬಾದ್ (ಸೆ.13): ಪ್ರಧಾನಿ ನರೇಂದ್ರ ಮೋದಿ ಸೆ.17 ರಂದು ತಮ್ಮ 66 ನೇ ಹುಟ್ಟುಹಬ್ಬವನ್ನು ತಮ್ಮ ತವರು ರಾಜ್ಯ ಗುಜರಾತ್ ನಲ್ಲಿ ಆಚರಿಸಿಕೊಳ್ಳಲಿದ್ದಾರೆ.
ತಮ್ಮ ತಾಯಿಯ ಆಶೀರ್ವಾದ ಪಡೆದು ಬುಡಕಟ್ಟು ಜನರೊಂದಿಗೆ ಮತ್ತು ವಿಕಲಚೇತನರೊಡನೆ ಕಳೆಯಲಿದ್ದಾರೆ. ಸೆ.17 ರಂದು ಅಹ್ಮದಾಬಾದ್ ಗೆ ತೆರಳಿದ ನಂತರ ಮೊದಲು ಗಾಂಧಿನಗರದಲ್ಲಿರುವ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ನಂತರ ಬುಡಕಟ್ಟು ಜನರು ಹೆಚ್ಚಾಗಿರುವ ದಾಹೋದ್ ಜಿಲ್ಲೆಗೆ ಭೇಟಿ ನೀಡಿ ಕದನ-ಹಫೇಶ್ವರ್ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಜನರನ್ನುದ್ದೇಶಿ ಮಾತನಾಡಲಿದ್ದಾರೆ.
