ತೆಲಂಗಾಣದಲ್ಲಿ ದೀರ್ಘ ಕಾಲದಿಂದ ಕಾಂಗ್ರೆಸ್‌ ಪಕ್ಷದ ಮೇಲೆ ನಿಷ್ಠೆಯಿಟ್ಟಿರುವ ಹಿರಿಯರೊಬ್ಬರಿಗೆ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಸ್ಥಳದಲ್ಲೇ ಇದ್ದ ಮತ್ತೋರ್ವ ನಾಯಕರ ಚಿನ್ನದ ಬ್ರಾಸ್‌ಲೆಟ್‌ ಉಡುಗೊರೆ ಕೊಡಿಸಿದ ಕುತೂಹಲಕಾರಿ ಘಟನೆ ನಡೆದಿದೆ. 

ಹೈದರಾಬಾದ್‌(ಜೂ.17): ತೆಲಂಗಾಣದಲ್ಲಿ ದೀರ್ಘ ಕಾಲದಿಂದ ಕಾಂಗ್ರೆಸ್‌ ಪಕ್ಷದ ಮೇಲೆ ನಿಷ್ಠೆಯಿಟ್ಟಿರುವ ಹಿರಿಯರೊಬ್ಬರಿಗೆ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಸ್ಥಳದಲ್ಲೇ ಇದ್ದ ಮತ್ತೋರ್ವ ನಾಯಕರ ಚಿನ್ನದ ಬ್ರಾಸ್‌ಲೆಟ್‌ ಉಡುಗೊರೆ ಕೊಡಿಸಿದ ಕುತೂಹಲಕಾರಿ ಘಟನೆ ನಡೆದಿದೆ. 

ರಾರ‍ಯಲಿಯೊಂದರಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿಯವರಿಗೆ ಕಾಂಗ್ರೆಸ್‌'ನ ಮಾಜಿ ಸಂಸದ ವಿ. ಹನುಮಂತ ರಾವ್‌ ಮಾಜಿ ಶಾಸಕ ಟಿ. ಜಯಪ್ರಕಾಶ್‌ ರೆಡ್ಡಿಯವರನ್ನು ಪರಿಚಯಿಸಿದ್ದಾರೆ. ಹಿರಿಯರಾದ ರೆಡ್ಡಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಕಾಲದಿಂದಲೂ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ರೆಂದು ಪರಿಚಯಿಸಲಾಯಿತು. 

ಇದರಿಂದ ಸಂತುಷ್ಟರಾದ ರಾಹುಲ್‌ ತಕ್ಷಣಕ್ಕೇ ಹನುಮಂತ ರಾವ್‌ ಧರಿಸಿದ್ದ ಬ್ರಾಸ್‌'ಲೆಟ್‌ ತಮ್ಮ ಪ್ರೀತಿಯ ದ್ಯೋತಕವಾಗಿ, ಸ್ಥಳೀಯವಾಗಿ ಜಗ್ಗಾ ರೆಡ್ಡಿ ಎಂದೇ ಖ್ಯಾತರಾಗಿರುವ ಹಿರಿಯ ಕಾಂಗ್ರೆಸ್‌ ನಾಯಕಗೆ ನೀಡುವಂತೆ ಸೂಚಿಸಿದರು. ಆದರೆ ತಕ್ಷಣಕ್ಕೆ ಅದನ್ನು ತೆಗೆಯಲು ರಾವ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಮನೆಗೆ ತೆರಳಿದ ಬಳಿಕ ಬ್ರಾಸ್‌ಲೆಟ್‌ ತೆಗೆದು ಅದನ್ನು ರೆಡ್ಡಿ ಅವರಿಗೆ ನೀಡಿದ್ದಾರೆ. ಬ್ರಾಸ್‌ಲೆಟ್‌ ಸ್ವೀಕರಿಸಿರುವ ರೆಡ್ಡಿ ಅವರು ಬಳಿಕ ಅದನ್ನು ಹರಾಜು ಹಾಕಿದ್ದು, ಅದರಿಂದ . 20 ಲಕ್ಷ ಸಂಗ್ರಹವಾಗಿದೆ. ಈ ಹಣವನ್ನು ರೈತರಿಗೆ ನೀಡಲು ರೆಡ್ಡಿ ನಿರ್ಧರಿಸಿದ್ದಾರೆ.