ಪರ್ರಿಕರ್ ಸಾರ್ವಜನಿಕವಾಗಿ ಆಡಿದ ಕೊನೇ ನುಡಿ: ಹೌ ಇಸ್ ದಿ ಜೋಶ್?
ಪಣಜಿ[ಮಾ.18]: ಇತ್ತೀಚೆಗೆ ಮಾಂಡೋವಿ ಸೇತುವೆ (ಅಟಲ್ ಸೇತು) ಉದ್ಘಾಟನೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಮನೋಹರ್ ಪರ್ರಿಕರ್ ಅವರು ಆಡಿದ ಕೊನೆಯ ಸಾರ್ವಜನಿಕ ನುಡಿಯೆಂದರೆ ‘ಹೌ ಈಸ್ ದ ಜೋಶ್’? (ನಿಮ್ಮಲ್ಲಿ ಹೇಗಿದೆ ಜೋಶ್).
ರೋಗದಿಂದ ತತ್ತರಿಸಿ ಅತ್ಯಂತ ಕೃಶರಾಗಿದ್ದ ಪರ್ರಿಕರ್ ಅವರು ಮೂಗಿಗೆ ಆಮ್ಲಜನಕದ ನಳಿಕೆಯನ್ನು ಹಾಕಿಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ ಪರ್ರಿಕರ್, ‘ಹೌ ಇಸ್ ದ ಜೋಶ್? ನಾನು ನಿಮಗೆ (ಜನರಿಗೆ) ಸ್ಪಲ್ಪ ಜೋಶ್ ವರ್ಗಾಯಿಸುತ್ತೇನೆ. ಇಲ್ಲೇ ಕುಳಿತು ಸ್ವಲ್ಪ ಮಾತನಾಡುತ್ತೇನೆ. ನನ್ನ ಬಾಕಿ ಜೋಶ್ ಅನ್ನು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಇರಿಸಿಕೊಳ್ಳುತ್ತೇನೆ’ ಎಂದು ಮಾರ್ಮಿಕವಾಗಿ ಹೇಳಿದ್ದರು.
ಆದರೆ ವಿಧಿಯಾಟವು ಅವರನ್ನು ಲೋಕಸಭೆ ಚುನಾವಣೆಗೆ ಮುನ್ನವೇ ಕರೆದೊಯ್ದಿದೆ.
