ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ ತಮ್ಮ ಮುಂದಿನ ಚಿತ್ರ ‘ಸಿಮ್ರಾನ್’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದನ್ನು ಹೇಳಿದರು. ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದವರಿಗೆ ಅವರು ಕೊಟ್ಟಿದ್ದು ರೋಚಕ ಸುದ್ದಿ. ಕಂಗನಾ ಅಮೆರಿಕಾದಲ್ಲಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿ ಬಂದಿದ್ದಾರೆ.

ಮುಂಬೈ(ಆ.12): ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ ತಮ್ಮ ಮುಂದಿನ ಚಿತ್ರ ‘ಸಿಮ್ರಾನ್’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದನ್ನು ಹೇಳಿದರು. ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದವರಿಗೆ ಅವರು ಕೊಟ್ಟಿದ್ದು ರೋಚಕ ಸುದ್ದಿ. ಕಂಗನಾ ಅಮೆರಿಕಾದಲ್ಲಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿ ಬಂದಿದ್ದಾರೆ.

ಕೆಲವು ದಿನಗಳ ಹಿಂದೆ ಅವರು ಅಮೆರಿಕದಲ್ಲಿ ರಾತ್ರಿಯ ವೇಳೆ ಹೆದ್ದಾರಿಯಲ್ಲಿ ಪ್ರಯಾಣ ಮಾಡುವಾಗ ಕಾರ್ ಡ್ರೈವರ್ ಬಳಲಿಕೆಯಿಂದ ನಿದ್ದೆಗೆ ಜಾರಿದ್ದಾನೆ. ಇದರಿಂದ ಕಾರ್‌ಗೆ ಅಪಘಾತವಾಗುವ ಸಂ‘ವವೂ ಎದುರಾಗಿದೆ. ಆದರೆ ಅದೃಷ್ಟವಶಾತ್ ಕಾರ್ ಅನ್ನು ಹೆದ್ದಾರಿ ಪಕ್ಕದಲ್ಲಿ ತಕ್ಷಣ ನಿಲ್ಲಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ‘ಡ್ರೈವರ್ ಅನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸುವುದರಲ್ಲಿ ಸಾಕು ಸಾಕಾಯಿತು. ನನಗೆ ಆ ಘಟನೆ ತೀವ್ರ ರೋಚಕವಾಗಿ ಕಾಡುತ್ತಿದೆ’ ಎಂದು ಕಂಗನಾ ಹೇಳಿದಾಗ ಅಲ್ಲಿದ್ದವರಿಗೆ ಅಚ್ಚರಿ.

ಇದರ ಜೊತೆಗೆ ‘ಸಿಮ್ರಾನ್’ ಚಿತ್ರದ ಕಥೆ ಕುರಿತು ಅಪೂರ್ವ ಅಸ್ರಾಣಿ ನಡುವೆ ಎದ್ದಿರುವ ಚರ್ಚೆಯ ಬಗ್ಗೆಯೂ ಮಾತನಾಡಿದ ಕಂಗನಾ ಇದೊಂದು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಚರ್ಚೆ ಎಂದು ಹೇಳಿ ಅಸ್ರಾಣಿಗೆ ಟಾಂಗ್ ನೀಡಿದರು. ಈ ಮೂಲಕ ಕಂಗನಾ ತಾವು ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸೂಚನೆಯನ್ನೂ ನೀಡಿದ್ದಾರೆ.