ಕರ್ನಾಟಕ ವಿಧಾನ ಸಭಾ ಚುನಾವಣೆ 6 ತಿಂಗಳು ಮುಂದೆ ಹೋಗುತ್ತಾ..?

First Published 3, Mar 2018, 11:44 AM IST
When is Karnataka Assembly election
Highlights

ಬರುವ ಮೇ ತಿಂಗಳಲ್ಲಿ ನಡೆಯಬೇಕಾದ ವಿಧಾನಸಭಾ ಚುನಾವಣೆ ಆರು ತಿಂಗಳ ಕಾಲ ಮುಂದೂಡಲ್ಪಡುವುದೇ ಎಂಬ ಅನುಮಾನ ಮತ್ತು ವದಂತಿ ರಾಜ್ಯ ರಾಜಕಾರಣದಿಂದ ಹೊರಬಿದ್ದಿದೆ. ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವಂತಾಗ ಬೇಕು ಎಂಬ ದಿಕ್ಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನ ಆರಂಭಿಸಿರುವುದ ರಿಂದ ಈ ವದಂತಿ ಹೊರಬಿದ್ದಿದೆ.

ಬೆಂಗಳೂರು : ಬರುವ ಮೇ ತಿಂಗಳಲ್ಲಿ ನಡೆಯಬೇಕಾದ ವಿಧಾನಸಭಾ ಚುನಾವಣೆ ಆರು ತಿಂಗಳ ಕಾಲ ಮುಂದೂಡಲ್ಪಡುವುದೇ ಎಂಬ ಅನುಮಾನ ಮತ್ತು ವದಂತಿ ರಾಜ್ಯ ರಾಜಕಾರಣದಿಂದ ಹೊರಬಿದ್ದಿದೆ. ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವಂತಾಗ ಬೇಕು ಎಂಬ ದಿಕ್ಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನ ಆರಂಭಿಸಿರುವುದ ರಿಂದ ಈ ವದಂತಿ ಹೊರಬಿದ್ದಿದೆ.

ಈ ವರ್ಷದ ಅಂತ್ಯದಲ್ಲಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಗಲಿದೆ. ಆ ವೇಳೆಯಲ್ಲಿಯೇ ಲೋಕಸಭೆಗೂ ಅವಧಿ ಪೂರ್ವ ಚುನಾವಣೆ ನಡೆಸುವ ಬಗ್ಗೆ ಮೋದಿ ಸೇರಿದಂತೆ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಅದರ ಸಾಧಕ ಬಾಧಕಗಳ ಲೆಕ್ಕಾಚಾರ ಹಾಕತೊಡಗಿ ದ್ದಾರೆ.

ಅದರ ಬೆನ್ನಲ್ಲೇ ಇಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರುವ ಬಗ್ಗೆ ವರಿಷ್ಠರಿಗೂ ಅನುಮಾನವಿದೆ. ಹೀಗಾಗಿ ಕಾನೂನಿನ ನೆರವು ಪಡೆದುಕೊಂಡು ಆರು ತಿಂಗಳ ಕಾಲ ಮುಂದೂಡುವ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂಬ ವದಂತಿ ಕೇಳಿಬರತೊಡಗಿದೆ.

ಆದರೆ, ಈ ವದಂತಿಯನ್ನು ರಾಜ್ಯ ಬಿಜೆಪಿ ನಾಯಕರು ನಿರಾಕರಿಸುತ್ತಿದ್ದಾರೆ. ಆ ರೀತಿಯ ಯಾವುದೇ ಚಿಂತನೆ ಅಥವಾ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತಲೆಯಲ್ಲಿ ಏನು ಓಡುತ್ತಿದೆಯೋ ಎಂಬುದು ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕರಿಗೂ ಮಾಹಿತಿ ಇಲ್ಲ ಎನ್ನುವುದು ಮಾತ್ರ ಸತ್ಯ.

ಇತ್ತೀಚೆಗಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೂ ಅಭಿವೃದ್ಧಿ ಉದ್ದೇಶದಿಂದ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವಂತಾಗಬೇಕು. ದೆಹಲಿಯಲ್ಲಿ ನಡೆಯುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರತಿಪಾದನೆ ಮಾಡುವುದಾಗಿಯೂ ತಿಳಿಸಿದ್ದರು. ಹೀಗಿರುವಾಗ ಕರ್ನಾಟಕ ವಿಧಾನಸಭೆಯ ಚುನಾವಣೆಯನ್ನೂ ಮುಂದೂಡಿ ಏಕಕಾಲದಲ್ಲಿ ನಡೆಯುವಂತೆ ಮಾಡಲಾಗುತ್ತದೆಯೇ ಎಂಬ ಅನುಮಾನ ಟಿಸಿಲೊಡೆದಿದೆ. ಹಾಗಾದಲ್ಲಿ ಅಲ್ಲಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶ ಕಲ್ಪಿಸಬಹುದು ಎಂಬ ಮಾತು ಕೇಳಿಬರುತ್ತಿದೆ.

loader