ವಾಟ್ಸ್'ಆಪ್ ಈ ರೀತಿಯೂ ಪ್ರಯೋಜನಕ್ಕೆ ಬರುತ್ತೇ ಅಂದ್ರೆ ನಿಜಕ್ಕೂ ನಂಬಲೇಬೇಕು..!

First Published 18, Mar 2018, 7:35 PM IST
WhatsApp Helps Find out Missing Bike
Highlights

ಜಿಸಿ ಲ್ಯಾಬ್ ಬಳಿ ನಿಂತಿದ್ದ ಪೋಟೋ ಗ್ರಾಫರ್ ಆನಂದ್ ಎನ್ನುವವರ ಪಲ್ಸರ್ ಬೈಕ್‌ ನಿನ್ನೆ ರಾತ್ರಿ ಕಳ್ಳತನವಾಗಿದೆ. ವಾಹನದ ಪೋಟೋ ಸಮೇತ ನಂಬರ್ ಗ್ರೂಪ್'ನಲ್ಲಿ ಹಾಕಿ ಈ ನಂಬರಿನ ವಾಹನ ಕಂಡರೆ ಕರೆ ಮಾಡಲು ತಿಳಿಸಿದ್ದಾರೆ.

ಸಾಮಾನ್ಯವಾಗಿ ವಾಟ್ಸಾಪ್ ಗ್ರೂಪ್ ಗುಡ್ ಮಾರ್ನಿಂಗ್ ಗುಡ್ ನೈಟ್'ಗೆ ಹೆಚ್ಚಿನದಾಗಿ ಬಳಕೆಯಾಗುತ್ತದೆ. ಆದರೆ ಇಲ್ಲೊಂದು ಪೋಟೋ ಗ್ರಾಫರ್ ಗ್ರೂಪ್ ಕಳೆದ ಹೋದ ಬೈಕ್ ಹುಡುಕಿಕೊಡಲು ಸಹಕಾರಿಯಾಗಿದೆ.

ಹೌದು, ಜಿಸಿ ಲ್ಯಾಬ್ ಬಳಿ ನಿಂತಿದ್ದ ಪೋಟೋ ಗ್ರಾಫರ್ ಆನಂದ್ ಎನ್ನುವವರ ಪಲ್ಸರ್ ಬೈಕ್‌ ನಿನ್ನೆ ರಾತ್ರಿ ಕಳ್ಳತನವಾಗಿದೆ. ವಾಹನದ ಪೋಟೋ ಸಮೇತ ನಂಬರ್ ಗ್ರೂಪ್'ನಲ್ಲಿ ಹಾಕಿ ಈ ನಂಬರಿನ ವಾಹನ ಕಂಡರೆ ಕರೆ ಮಾಡಲು ತಿಳಿಸಿದ್ದಾರೆ.

ಇಂದು ಕಳ್ಳತನವಾದ ಬೈಕನಲ್ಲಿ ರಾಜಾರೋಷವಾಗಿ ತಿರುಗಾಡುವಾಗ ಫೋಟೋಗ್ರಾಫರ್ ರಘು ಎನ್ನುವವರು ನೋಡಿ ಗ್ರೂಪ್'ನಲ್ಲಿ ‌ಮೆಸೇಜ್ ಹಾಕುವುದರ ಜೊತೆ ಆನಂದ್ ಅವರಿಗೆ ಕರೆ ಮಾಡಿದ್ದಾರೆ. ಮಯೂರ ಹೊಟೇಲ್ ಬಳಿ ಸಿಕ್ಕ ಕಳ್ಳನನ್ನು ಹಿಗ್ಗಾಮುಗ್ಗ ಥಳಿಸಿ ಬ್ರೂಸ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನ ಮಾಡಿದ ರಾಮು ವಿದ್ಯಾರ್ಥಿ ಎನ್ನಲಾಗುತ್ತಿದ್ದು, ಬುದ್ದಿಮಾತು ಹೇಳಿ ಕಳಿಹಿಸುವಂತೆ ದೂರು ಕೊಟ್ಟ ಆನಂದ್ ತಿಳಿಸಿದ್ದಾರೆ.

loader